ಉತ್ತರ ಪ್ರದೇಶದ ಪ್ರಯಾಗ್ ರಾಜ್ ಮಹಾಕುಂಭ ಮೇಳದಲ್ಲಿ(Prayag Raj Mahakumbha Mela) ಕಣ್ಣುಗಳಿಂದಲೇ ಫೇಮಸ್ ಆಗಿರುವ ಮೊನಾಲಿಸಾ ನೋಡಲು ಈಗ ಜನ ಮುಗಿ ಬೀಳುತ್ತಿದ್ದಾರೆ. ಇದರಿಂದ ಬೇಸತ್ತ ಮೊನಾಲಿಸಾ ಗೂಡು ಸೇರಿದರೂ ಜನ ಅವರನ್ನು ಬಿಡುತ್ತಿಲ್ಲ. ಹೀಗೆ ಟೆಂಟ್ ಗೆ ನುಗ್ಗಿ ಆಕೆಯ ಸಹೋದರನನ್ನು ಥಳಿಸಿರುವ ಘಟನೆ ನಡೆದಿದೆ.
ವ್ಯಕ್ತಿಯೊಬ್ಬ ಬಲವಂತವಾಗಿ ಟೆಂಟ್ ಗೆ ನುಗ್ಗಿ ಫೋಟೊ ತೆಗೆದುಕೊಳ್ಳಲು ಯತ್ನಿಸಿದಾಗ ಯುವತಿಯ ಸಹೋದರ ಮುಂದಾಗಿದ್ದಾರೆ. ಈ ವೇಳೆ ಸಹೋದರನ ಮೇಲೆಯೇ ಆ ವ್ಯಕ್ತಿ ಹಲ್ಲೆ ಮಾಡಿದ್ದಾನೆ.
ಇದರಿಂದ ಆತಂಕಗೊಂಡಿರುವ ಯುವತಿ, ನನಗೆ ಭಯವಾಗುತ್ತಿದೆ. ಯಾರೂ ಇಲ್ಲದ ವೇಳೆ ಯಾರಾದರೂ ಹಾನಿ ಮಾಡಬಹುದು ಎನಿಸುತ್ತಿದೆ. ಕರೆಂಟ್ ಇಲ್ಲ, ಆದರೂ ಜನರು ಬಲವಂತವಾಗಿ ಟೆಂಟ್ ಪ್ರವೇಶಿಸುತ್ತಿದ್ದಾರೆ ಎಂದು ಮೊನಾಲಿಸಾ ಅಳಲು ತೋಡಿಕೊಂಡಿದ್ದಾರೆ. ಮಹಾ ಕುಂಭಮೇಳದಲ್ಲಿ ವ್ಯಕ್ತಿಯೊಬ್ಬರು ಈ ಯುವತಿಯನ್ನು ಸೆರೆ ಹಿಡಿದು ವೈರಲ್ ಮಾಡುತ್ತಿದ್ದಂತೆ ಅವರ ನೈಜ ಸೌಂದರ್ಯದಿಂದ ಖ್ಯಾತಿ ಪಡೆದು ಬಿಟ್ಟಿದ್ದಾರೆ.
ಅವಾಗನಿಂದ ಆ ಯುವತಿಯೊಂದಿಗೆ ರೀಲ್ಸ್ ಮಾಡುವುದು, ಸಂದರ್ಶನ ನಡೆಸುವವರು, ಫೋಟೊ ಕ್ಲಿಕ್ಕಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿ ಬಿಟ್ಟಿದೆ. ಯುವತಿಯ ತಂದೆ ಮನೆಗೆ ಕಳುಹಿಸಿದ್ದಾರೆ ಎಂಬ ವರದಿಗಳು ಹೊರಬಿದ್ದಿವೆ. ಆದರೂ ಜನ ಮುಗಿ ಬೀಳುತ್ತಿರುವುದು ಯುವತಿಯ ಕುಟುಂಬಸ್ಥರ ಆತಂಕಕ್ಕೆ ಕಾರಣವಾಗುತ್ತಿದೆ.