ಹಾವೇರಿ: ಇತ್ತೀಚೆಗೆ ರಾಜ್ಯದಲ್ಲಿ ಫೈನಾನ್ಸ್ ಗಳ(finance) ಕಿರುಕುಳ ಹೆಚ್ಚಾಗುತ್ತಿದ್ದು, ಮಹಿಳೆಯರ ಮಾಂಗಲ್ಯ ಉಳಿಸುವಂತೆ ಸಿಎಂ ಸಿದ್ದರಾಮಯ್ಯ ಮೊರೆ ಹೋಗಲಾಗಿದೆ.
ಫೈನಾನ್ಸ್ ಕಿರುಕುಳ ತಪ್ಪಿಸಬೇಕೆಂದು ಆಗ್ರಹಿಸಿ ರಾಜ್ಯ ರೈತ(former) ಸಂಘದ ರಾಣೇಬೆನ್ನೂರ ತಾಲೂಕು ಘಟಕದಿಂದ ಪ್ರತಿಭಟನೆ (protest)ನಡೆಸಿ ಮನವಿ ನಡೆಸಲಾಯಿತು. ತಾಲೂಕಿನಾದ್ಯಂತ ಕೆಲವು ಫೈನಾನ್ಸ್ ಗಳು ಲೋನ್ ಕೊಟ್ಟು, ದುಪ್ಪಟ್ಟು ಬಡ್ಡಿ ವಸೂಲಿ ಮಾಡುತ್ತಿವೆ. ರಾತ್ರಿ ವೇಳೆ ಮನೆಯ ಮುಂದೆ ಬಂದು ಬಡ್ಡಿ ಕಟ್ಟುವಂತೆ ಕುಟುಂಬಸ್ಥರನ್ನು ಅವಮಾನ ಮಾಡಲಾಗುತ್ತಿದೆ.
ಮನೆಗೆ ಬೀಗ ಹಾಕುತ್ತೇವೆ. ಹರಾಜು ಮಾಡುತ್ತೇವೆ ಎಂದು ಗೂಂಡಾ ವರ್ತನೆ ತೋರುತ್ತಿದ್ದಾರೆ. ಇದರಿಂದಾಗಿ ಜನರು ಊರು ಬಿಟ್ಟು ಹೋಗುತ್ತಿದ್ದಾರೆ. ಹಲವರು ಆತ್ಮಹತ್ಯೆಗೆ (suicied)ಶರಣಾಗುತ್ತಿದ್ದಾರೆ. ಕೂಡಲೇ ಸಿಎಂ ಮಧ್ಯಪ್ರವೇಶಿಸಿ ಫೈನಾನ್ಸ್ ಗಳಿಗೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದ್ದಾರೆ.
ಮೈಕ್ರೋ ಫೈನಾನ್ಸ್ ಹಾವಳಿಯ ವಿಚಾರಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕ್ರಮದ ಎಚ್ಚರಿಕೆಯನ್ನು ಗೃಹ ಸಚಿವ ಡಾ.ಜಿ. ಪರಮೇಶ್ವರ್(Dr. G. Parameshwar) ನೀಡಿದ್ದಾರೆ. ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಸಿಲುಕಿಕೊಂಡವರ ದೂರಿನನ್ವಯ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ತಿಪಟೂರಲ್ಲಿ ಮಹಿಳೆ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತಪ್ಪಿತಸ್ಥರ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.