ಬೆಂಗಳೂರು: ನಿನ್ನೆ ನಡೆದ ಬಿಜೆಪಿಯ ಕೋರ್ ಕಮಿಟಿ ಸಭೆಯಲ್ಲಿ, ವಿಧಾನಪರಿಷತ್ (Legislature) ಸದಸ್ಯ ಸಿ.ಟಿ.ರವಿಗೆ, ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್‌ವಾಲ್(Radhamohan Das Agarwal) ಕ್ಲಾಸ್ ತೆಗೆದುಕೊಂಡಿದ್ದಾರೆ. ಇತ್ತೀಚೆಗೆ ಸಿ. ಟಿ.ರವಿ(ct ravi) ಮಾಧ್ಯಮಗಳ ಮುಂದೆ ಮಾತನ್ನಾಡುವಾಗ ಮುಂದಿನ ಪ್ರಧಾನಿ ಯೋಗಿ ಆದಿತ್ಯನಾಥ್ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಗಮನಿಸಿದ್ದ ರಾಧಾಮೋಹನ್ ದಾಸ್ ಅಗರ್‌ವಾಲ್, ಸಿ.ಟಿ.ರವಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಸಿ.ಟಿ.ರವಿ ಅವರೇ – “ನೀವು ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ರಿ. ನಿಮ್ಮನ್ನು ಕರೆತಂದು ಇಂದು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿದ್ದೇವೆ. ನಿಮ್ಮಲ್ಲಿ ಮಾತನ್ನಾಡುವ ಶಕ್ತಿ ಸಾಮರ್ಥ್ಯ ಇದೆ ಎಂಬ ಕಾರಣಕ್ಕೆ. ಈಗ ನೀವು ಮುಂದಿನ ಪ್ರಧಾನಮಂತ್ರಿ ಯೋಗಿ ಆದಿತ್ಯನಾಥ್(Yogi Adityanath) ಆಗುತ್ತಾರೆ ಎಂದು ಹೇಳಿದ್ದೀರಿ.
ದೇಶದಲ್ಲಿ ಪ್ರಧಾನಮಂತ್ರಿಗಳ ಖುರ್ಚಿ ಖಾಲಿ ಇದೆಯೇ? ಇಂತಹ ಹೇಳಿಕೆಗಳು ಕೊಡುವ ಅವಶ್ಯಕತೆ ಏನಿತ್ತು? ನರೇಂದ್ರ ಮೋದಿ ಅವರ ಜನಪ್ರಿಯತೆ ಏನು? ಯೋಗಿ ಆದಿತ್ಯನಾಥ್ ಅವರ ಜನಪ್ರಿಯತೆ ಏನು? ನರೇಂದ್ರ ಮೋದಿ ಅವರು ಪ್ರಪಂಚಕ್ಕೆ ಪರಿಚಯವಿರುವವರು.
ಆ ಸ್ಥಾನವೇ ಸದ್ಯಕ್ಕೆ ಖಾಲಿಯಿಲ್ಲ. ಅಂತಹುದರಲ್ಲಿ ನೀವು ಇಂತಹ ಹೇಳಿಕೆ ನೀಡಿದ್ದಾದ್ರೂ ಏಕೆ? ಯಾವ ಸಂದರ್ಭದಲ್ಲಿ ಇಂತಹ ಹೇಳಿಕೆ ದಾಖಲಿಸಿದ್ದೀರಿ? ನೀವು ಮಾಧ್ಯಮದಿಂದ ಅಂತರವನ್ನು ಕಾಪಾಡುವುದು ಉತ್ತಮ. ಇದೇ ಮೊದಲು, ಇದೇ ಕೊನೆ. ಇಂತಹ ಹೇಳಿಕೆಗಳು ಇನ್ನೊಮ್ಮೆ ನನ್ನ ಕಿವಿಗೆ ಬೀಳಬಾರದು.”
ಹೀಗೆ ಸಿ.ಟಿ.ರವಿಗೆ ರಾಧಾಮೋಹನ್ ದಾಸ್ ಅಗರ್‌ವಾಲ್ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂಬ ಮಾತುಗಳು ಬಿಜೆಪಿ ಪಾಳಯದಲ್ಲಿ ಆರಂಭವಾಗಿದೆ.