ಬೆಂಗಳೂರು: ನಿಮ್ಮ ಮನೆಗೆ ಮಾಟ-ಮಂತ್ರ ಮಾಡಿಸಿದ್ದಾರೆ. ಪೂಜೆ ಮಾಡುತ್ತೇನೆ ಎಂದು ಹೇಳಿ ಮನೆ ದೋಚಿ ಪರಾರಿಯಾಗಿದ್ದ ಅಸಾಮಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವೆಂಕಟರಮಣ ಬಂಧಿತ ಆರೋಪಿ. ಬುಡುಬುಡುಕೆ ವೇಷ ಧರಿಸಿ ಒಂಟಿ ಮಹಿಳೆಯರಿರುವ ಮನೆಗೆ ಬರುತ್ತಿದ್ದ. ಅಲ್ಲಿ ನಿಮ್ಮ ಮನೆಗೆ ಮಾಟ-ಮಂತ್ರ ಮಾಡಲಾಗಿದೆ. ಪೂಜೆ ಮಾಡದಿದ್ದರೆ ಮನೆಯವರೆಲ್ಲ ಸಾಯುತ್ತೀರಿ ಎಂದು ಹೆದರಿಸುತ್ತಿದ್ದ.
ಮನೆಯಲ್ಲಿದ್ದ ಚಿನ್ನಾಭರಣ ಪೂಜೆ ಮಾಡಿದರೆ ಸಮಸ್ಯೆ ಪರಿಹಾರವಾಗುತ್ತದೆ ಎಂದು ನಂಬಿಸುತ್ತಿದ್ದ. ಆನಂತರ ಮನೆಯಲ್ಲಿದ್ದ ಚಿನ್ನಾಭರಣ ಪಡೆದು ಎರಡು ಕುಡಿಕೆಯಲ್ಲಿ ಹಾಕಿ ಪೂಜೆ ಮಾಡಲು ಆರಂಭಿಸುತ್ತಿದ್ದ. ಪೂಜೆ ಸಾಮಾಗ್ರಿಗಳನ್ನು ತರಲು ಹೇಳಿ ಬಂಗಾರವಿರುವ ಕುಡಿಕೆಗಳನ್ನ ಚೀಲದಲ್ಲಿ ತುಂಬಿ, ಖಾಲಿ ಮಡಿಕೆ ಇಟ್ಟು ಪೂಜೆ ಮಾಡುತ್ತಿದ್ದ. ಎರಡು ದಿನ ಬಿಟ್ಟು ಮಡಿಕೆ ಓಪನ್ ಮಾಡಿ ನಿಮ್ಮ ಸಮಸ್ಯೆ ಬಗೆಹರಿಯುತ್ತದೆ ಎಂದು ಹೇಳಿ ಪರಾರಿಯಾಗುತ್ತಿದ್ದ.
ಕಳೆದ ವರ್ಷ ಮಾರ್ಚ್ ನಲ್ಲಿ ಇಂತಹುದೇ ಘಟನೆ ನಡೆದಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಬೊಮ್ಮನಹಳ್ಳಿ ಪೊಲೀಸರು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತನಿಂದ ಎಂಟೂವರೆ ಲಕ್ಷ ರೂ. ಮೌಲ್ಯದ 115 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.