ನವದೆಹಲಿ: ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 12 ವರ್ಷಗಳ ಬಳಿಕ ರಣಜಿ ಆಡಲು ಮುಂದಾಗಿದ್ದಾರೆ. ಅವರು 2012ರಲ್ಲಿ ರಣಜಿ ಆಡಿದ್ದರು. ಜನವರಿ 30ರಿಂದ ರೈಲ್ವೇಸ್ ವಿರುದ್ಧ ನಡೆಯಲಿರುವ ದೆಹಲಿಯ ಕೊನೆಯ ಲೀಗ್ ಪಂದ್ಯಕ್ಕೆ ಲಭ್ಯರಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.
ಇದೇ 23ರಿಂದ ಸೌರಾಷ್ಡ್ರ ವಿರುದ್ಧ ರಾಜಕೋಟ್‌ನಲ್ಲಿ(Rajkot) ನಡೆಯುವ ಪಂದ್ಯಕ್ಕೆ ಕತ್ತು ನೋವಿನ ಕಾರಣ ಲಭ್ಯರಿರುವುದಿಲ್ಲ ಎಂದು ಅವರು ತಿಳಿಸಿದ್ದರು. ಆದರೆ ಕೊನೆಯ ಲೀಗ್ ಪಂದ್ಯಕ್ಕೆ ಲಭ್ಯರಿರುವುದಾಗಿ ಅವರು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಗೆ (ಡಿಡಿಸಿಎ) ಮಾಹಿತಿ ನೀಡಿದ್ದಾರೆ ಎಂದು ದೆಹಲಿ ತಂಡದ ಹೆಡ್ ಕೋಚ್ ಸರಣ್‌ದೀಪ್ ಸಿಂಗ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ಸರಣಿ ಸೋತ ನಂತರ ದೇಶಿ ಕ್ರಿಕೆಟ್‌ನಲ್ಲಿ ಆಡುವುದು ಕಡ್ಡಾಯ ಎಂದು ಬಿಸಿಸಿಐ ಇತ್ತೀಚೆಗೆ ಅಟಗಾರರಿಗೆ ಮಾರ್ಗಸೂಚಿಯಲ್ಲಿ ಎಚ್ಚರಿಕೆ ನೀಡಿತ್ತು