ಬೆಂಗಳೂರು: ನಮ್ಮ ಮೆಟ್ರೋ (Namma Metro) ಹಳಿಗೆ ಜಿಗಿದು ಯುವಕ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರದ (Bengaluru) ಹಸಿರು ಮಾರ್ಗದ ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ.
ಮೆಟ್ರೋ ಬರುತ್ತಿದ್ದಂತೆ ಫ್ಲಾಟ್ ಫಾರಂಗೆ ಜಿಗಿದ ಯುವಕ ಎರಡು ಹಳಿಗಳ ಮಧ್ಯೆ ಮಲಗಿದ್ದಾನೆ. ಕೂಡಲೇ, ಲೋಕೋ ಪೈಲಟ್ (Loco Pilot) ಸಮಯ ಪ್ರಜ್ಞೆ (Time consciousness) ಮೆರೆದು ಯುವಕನ ಪ್ರಾಣ ಉಳಿಸಿದ್ದಾರೆ. ಘಟನೆಯಿಂದಾಗಿ ಬಿಎಂಆರ್ಸಿಎಲ್ (BMRCL) ಮೆಟ್ರೋ ಸಂಚಾರ ಸ್ಥಗಿತಗೊಳಿಸಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.
ಯುವಕ ಮೆಟ್ರೋ ಹಳಿಗೆ ಹಾರುತ್ತಿದ್ದಂತೆ ಪೈಲೆಟ್ ಮೆಟ್ರೋ ನಿಲ್ಲಿಸಿದ್ದಾರೆ. ಸೋಮವಾರ(MONDAY) ಬೆಳಗ್ಗೆ ಈ ಘಟನೆ ನಡೆದಿದೆ. ಸದ್ಯ ಮೆಟ್ರೋ ಸಿಬ್ಬಂದಿ ಯುವಕನನ್ನು ರಕ್ಷಿಸಿದ್ದಾರೆ. ಇತ್ತೀಚೆಗೆ ಮೆಟ್ರೋ ನಿಲ್ದಾಣಗಳಲ್ಲಿ ಆತ್ಮಹತ್ಯೆಯ ಪ್ರಕರಣಗಳು (Cases of suicide) ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದೆ.