ವಿಜಯಪುರ: ವಿಜಯೇಂದ್ರ ತಂದೆಗೆ ಮನೆಯಲ್ಲಿ ಗೌರವ ನೀಡುವುದಿಲ್ಲ. ಮನೆಯಲ್ಲಿ ಮುದಿಯಾ ಅಂತಾನೆ. ಹೊರಗಡೆ ಪೂಜ್ಯ ತಂದೆ ಅಂತಾನೆ ಎಂದು ಎಂದು ವಿಜಯಪುರ (Vijayapura) ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ (BY Vijayendra) ಮಾಡಿದ ತಪ್ಪಿನಿಂದಲೇ ಯಡಿಯೂರಪ್ಪ (BS Yediyurappa) ಜೈಲಿಗೆ ಹೋಗಿ ಬರುವಂತಾಯಿತು. ಯಡಿಯೂರಪ್ಪ ಅವರಿಗೆ ಮಗನ ವ್ಯಾಮೋಹ ಹೆಚ್ಚಾಗಿದೆ. ಅದನ್ನು ಮೊದಲು ಬಿಡಬೇಕು. ಯಡಿಯೂರಪ್ಪಗೆ ಮನೆಯಲ್ಲಿ ಕಿಮ್ಮತ್ತಿಲ್ಲ ಎಂದು ಆರೋಪಿಸಿದ್ದಾರೆ.
ಯಡಿಯೂರಪ್ಪ ಕೂಡ ಹಲವರಿಗೆ ಮೋಸ ಮಾಡಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ಅನೇಕರನ್ನು ಮಣ್ಣಲ್ಲಿ ಇಟ್ಟಿದ್ದಾರೆ. ನಮ್ಮ ವಿರುದ್ಧ ಎರಡು ಹಂದಿಗಳು ಬಿಟ್ಟರೆ ಬೇರೆ ಯಾರೂ ಮಾತನಾಡಲ್ಲ. ಆ ಹಂದಿಗಳಿಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ವಿಜಯೇಂದ್ರ ಪರ ಹೊಗಳು ಭಟರು ಮಾತ್ರ ಮಾತನಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯೇಂದ್ರ ರಾಜ್ಯಾಧ್ಯಕ್ಷನಾಗಲು ಲಾಯಕ್ಕಿಲ್ಲ. ಅವನನ್ನು ನಾವ್ಯಾರು ಒಪ್ಪಲ್ಲ, ಅವನು ಕೂಡ ರಾಜೀನಾಮೆ ಕೊಡಬೇಕು. ಈತನಿಂದಲೇ ಸುನೀಲ್ ಕುಮಾರ್ ಕಾರ್ಯದರ್ಶಿ ಸ್ಥಾನ ಬಿಡುವಂತಾಯಿತು ಎಂದು ವಾಗ್ದಾಳಿ ನಡೆಸಿದ್ದಾರೆ.