Numeros Motors Launches Diplos Max at ‘Bharat Mobility Global Expo 2025’
ಭಾರತ, 17 ಜನವರಿ 2025: ಎಲೆಕ್ಟ್ರಿಕ್ ವಾಹನಗಳಲ್ಲಿ ಪರಿಣತಿ ಹೊಂದಿರುವ ಹೊಸ ಕಾಲದ ಒರಿಜಿನಲ್ ಈಕ್ವಿಪ್ಮೆಂಟ್ ತಯಾರಕ ಕಂಪನಿಯಾದ ನ್ಯೂಮೆರೋಸ್ ಮೋಟಾರ್ಸ್ ಕಂಪನಿ ವಿವಿಧೋದ್ದೇಶಗಳಿಗೆ ಬಳಕೆ ಆಗುವ ಮತ್ತು ಇ- ಸ್ಕೂಟರ್ ಡಿಪ್ಲೋಸ್ ಮ್ಯಾಕ್ಸ್ ಅನ್ನು ಬಿಡುಗಡೆ ಮಾಡಿದೆ. ಪಿಎಂ ಇ- ಡ್ರೈವ್ ಯೋಜನೆಯ(PM e-drive scheme) ಪ್ರಯೋಜನ ಸೇರಿದಂತೆ ಡಿಪ್ಲೋಸ್ ಆರಂಭಿಕ ಬೆಲೆ 86,999 ರೂಪಾಯಿ ನಿಗದಿ ಮಾಡಲಾಗಿದೆ.
ಇದೇ ಸಂದರ್ಭದಲ್ಲಿ ಕಂಪನಿಯು ತನ್ನ ಮತ್ತೊಂದು ವಿಶಿಷ್ಟವಾದ ಉತ್ಪನ್ನ ಪ್ಲಾಟ್ ಫಾರ್ಮ್ ಅನ್ನು ಅನಾವರಣಗೊಳಿಸಿದೆ. , ಇದು ಭಾರತದ ಮೊದಲ ಬೈಕ್- ಸ್ಕೂಟರ್ ಕ್ರಾಸ್ ಓವರ್. ವಿವಿಧ ರೀತಿಯ ಗ್ರಾಹಕ ವಿಭಾಗಗಳ ವಿವಿಧ ರೀತಿಯ ಅವಶ್ಯಕತೆಗಳನ್ನು ಪೂರೈಸಲು ಸೂಕ್ತವಾದ ವೈವಿಧ್ಯಮಯ ಶ್ರೇಣಿಯ ಉತ್ಪನ್ನಗಳನ್ನು ಒದಗಿಸುವ ಬ್ರ್ಯಾಂಡ್ ಆಗಿ ಬೆಳೆಯುವ ಕಡೆಗೆ ನ್ಯೂಮೆರೋಸ್ ಮೋಟಾರ್ಸ್ ಗಮನ ಹರಿಸಿದೆ.
ಡಿಪ್ಲೋಸ್ ಮ್ಯಾಕ್ಸ್ ಇ ವಿವಿಧ ಉದ್ದೇಶಗಳಿಗೆ ಬಳಸಬಲ್ಲ ಉತ್ಯುತ್ತಮ ಇ ಸ್ಕೂಟರ್. ಜೊತೆಗೆ ಮುಂದಿನ ಪೀಳಿಗೆಯ ಗಮನ ಸೆಳೆಯುವ ಸ್ಟೈಲ್ ಮತ್ತು ಕ್ರಿಯಾಶೀಲತೆ ಹೊಂದಿದೆ.
ಅತ್ಯಾಧುನಿಕ ಇಂಜಿನಿಯರಿಂಗ್ ಬಳಸಿಕೊಂಡು ನಿರ್ಮಿಸಲಾದ ಡಿಪ್ಲೋಸ್ ಮ್ಯಾಕ್ಸ್ ಇ ಸ್ಕೂಟರ್(Diplos Max E Scooter) ಈಗಾಗಲೇ ವಿವಿಧ ಭೂಪ್ರದೇಶಗಳಲ್ಲಿ 13.9 ಮಿಲಿಯನ್ ಕಿಲೋಮೀಟರ್ ಗಿಂತಲೂ ಹೆಚ್ಚು ದೂರ ಕ್ರಮಿಸಿದೆ. ಅದು ಅಸಾಧಾರಣ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದೆ.
ಇದು ಪ್ಯಾರಲಲ್ ಚೇಂಜಿಂಗ್ ಸಾಮರ್ಥ್ಯ ಹೊಂದಿದ್ದು, 3-4 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಸಂಪೂರ್ಣ ಬ್ಯಾಟರಿ ಚಾರ್ಜ್ ಮಾಡಬಹುದಾಗಿದೆ. ಈ ಮೂಲಕ ಶೀಘ್ರವೇ ಸ್ಕೂಟರ್ ಬಳಕೆಗೆ ಲಭ್ಯವಾಗಲಿದೆ. ವಿಶೇಷವಾಗಿ ಇ ಸ್ಕೂಟರ್ 140 ಕಿ.ಮೀಗಳ ಐಡಿಸಿ ರೇಂಜ್ ಅ ಹೊಂದಿದೆ .ಗಂಟೆಗೆ 63 ಕಿಮೀಗಳ ಗರಿಷ್ಠ ವೇಗದಲ್ಲಿ ಚಲಿಸುತ್ತದೆ.
ಸುರಕ್ಷತೆ: ಡಿಪ್ಲೋಸ್ ಇ ಸ್ಕೂಟರ್ ಡ್ಯುಯಲ್ ಡಿಸ್ಕ್ ಬ್ರೇಕ್ ಗಳು, ಉನ್ನತ ಕಾರ್ಯಕ್ಷಮತೆಯ ಎಲ್ ಇಡಿ ಲೈಟಿಂಗ್ ವ್ಯವಸ್ಥೆ ಹೊಂದಿದೆ. ಉನ್ನತ ದರ್ಜೆಯ ಸುರಕ್ಷತೆ ಒದಗಿಸಲು ಥೆಫ್ಟ್ ಅಲರ್ಟ್, ಜಿಯೋಫೆನ್ಸಿಂಗ್ ಮತ್ತು ವೆಹಿಕಲ್ ಟ್ರ್ಯಾಕಿಂಗ್ ನಂತಹ ಅತ್ಯಾಧುನಿಕ ಸ್ಮಾರ್ಟ್ ಫೀಚರ್ ಗಳನ್ನು ಒಳಗೊಂಡಿದೆ.

ವಿಶ್ವಾಸಾರ್ಹತೆ: ಸ್ಥಿರವಾದ ಮತ್ತು ದೀರ್ಘಕಾಲದಲ್ಲಿ ಅತ್ಯುತ್ತಮ ಕಾರ್ಯಕ್ಷಮತೆ ಒದಗಿಸುವ ಸಲುವಾಗಿ ಚಾಸಿಸ್, ಬ್ಯಾಟರಿ, ಮೋಟಾರ್, ಕಂಟ್ರೋಲರ್ ಗಳಂತಹ ವಾಹನ ವ್ಯವಸ್ಥೆಗಳನ್ನು ವಿನ್ಯಾಸಗೊಳಿಸಲಾಗಿದೆ, ಎಂಜಿನಿಯರಿಂಗ್ ಮಾಡಲಾಗಿದೆ ಮತ್ತು ಸಂಯೋಜಿಸಲಾಗಿದೆ.
ಬಾಳಿಕೆ: ಸುದೃಢವಾದ ಸ್ಕ್ವೇರ್ ಚಾಸಿಸ್ ಮತ್ತು ಅಗಲವಾದ ಟೈರ್ ಗಳನ್ನು ಹೊಂದಿದ್ದು, ದೀರ್ಘಕಾಲ ಬಾಳಿಕೆ ಬರುವಂತೆ ವಿನ್ಯಾಸಗೊಳಿಸಲಾಗಿದೆ. ವಿವಿಧ ರೀತಿಯ ಪ್ರದೇಶಗಳಲ್ಲಿ ಉತ್ತಮ ಕಂಟ್ರೋಲ್ ಸಿಗುವಂತೆ ಸಿದ್ಧಗೊಳಿಸಲಾಗಿದೆ ಮತ್ತು ವಿಸ್ತೃತ ವಾರಂಟಿಯನ್ನು ನೀಡಲಾಗುತ್ತದೆ.
ದೊಡ್ಡದಾದ 16 ಇಂಚಿನ ಟೈರ್ ಗಳನ್ನು ಹೊಂದಿರುವ ಈ ಸ್ಕೂಟರ್ ಗಳು ಯಾವುದೇ ರೀತಿಯ ರಸ್ತೆಗಳಲ್ಲಿ ಉತ್ತಮ ಸವಾರಿ ಮಾಡುವ ಸಾಮರ್ಥ್ಯವನ್ನು ಹೊಂದಿವೆ. ದೈನಂದಿನ ಪ್ರಯಾಣದಲ್ಲಿ ಸ್ಟೈಲ್, ಕನೆಕ್ಟಿವಿಟಿ ಮತ್ತು ಪ್ರಾಯೋಗಿಕತೆಯ ಸೊಗಸನ್ನು ಬಯಸುವ ಯುವ ಸವಾರರಿಗೆ ಡ್ಯುಯಲ್ ಸೀಟ್ ವೇರಿಯಂಟ್ ಒದಗಿಸಲಾಗಿದೆ.
ಸಿಇಓ ಶ್ರೇಯಸ್ ಶಿಬುಲಾಲ್ (CEO Shreyas Shibulal) ಈ ಸಂದರ್ಭದಲ್ಲಿ ಮಾತನಾಡಿ, ” ಸುಸ್ಥಿರ ನಗರ ಪರಿಸರ ವ್ಯವಸ್ಥೆಗಳ ಅಡಿಪಾಯವಾಗಿ ಸೂಕ್ತ ರೀತಿಯ ಸ್ವಚ್ಛ ಮತ್ತು ಪರಿಣಾಮಕಾರಿ ಸಾರಿಗೆ ಉತ್ಪನ್ನಗಳನ್ನು ಒದಗಿಸಲು ನ್ಯೂಮೆರೋಸ್ ಮೋಟಾರ್ಸ್ ಬದ್ಧವಾಗಿದೆ. ಸುರಕ್ಷಿತ, ವಿಶ್ವಾಸಾರ್ಹ ಮತ್ತು ಬಾಳಿಕೆ ಬರುವಂತಹಹ ಭಾರತದಲ್ಲಿ ತಯಾರಿಸಿದ ವಾಹನವನ್ನು ತಲುಪಿಸುವ ಮೂಲಕ ನಮ್ಮ ಬಳಕೆದಾರರ ವೈವಿಧ್ಯಮಯ ಅಗತ್ಯಗಳನ್ನು ಪೂರೈಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಹೇಳಿದರು.
ಗ್ರಾಹಕರ ಅನುಕೂಲಕ್ಕಾಗಿ ಕಂಪನಿಯು ತನ್ನ ಮಾರಾಟ ಮತ್ತು ಸೇವಾ ಜಾಲವನ್ನು ಸಕ್ರಿಯವಾಗಿ ವಿಸ್ತರಿಸುತ್ತಾ ಬರುತ್ತಿದೆ. ಪ್ರಸ್ತುತ ಕಂಪನಿಯು 14 ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಮತ್ತು ಆರ್ಥಿಕ ವರ್ಷ 25-26 ರ ಅಂತ್ಯದ ವೇಳೆಗೆ 170 ಡೀಲರ್ ಗಳನ್ನು ಹೊಂದಲು ಯೋಜಿಸಿದೆ.