ಬೆಂಗಳೂರು: ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಪ್ರಕರಣದ ವೀಡಿಯೋ, ಪೋಟೋ ನೀಡುವಂತೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯಿತು.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಅರ್ಜಿಯ ವಿಚಾರಣೆ(Hearing of application) ನಡೆಯಿತು. ವಿಡಿಯೋ ಹಾಗೂ ಫೋಟೋ ನೀಡಲು ಸಾಧ್ಯವಿಲ್ಲ. ಹೈಕೋರ್ಟ್ ನಲ್ಲಿ ಕೂಡ ಈ ಬಗ್ಗೆ ವಿಚಾರಣೆ ನಡೆಯುತ್ತಿದೆ. ಹೀಗಾಗಿ ನೀಡಲು ಸಾಧ್ಯವಿಲ್ಲ. ಆದರೆ, ನೋಡಬಹುದು. ಇಂದೇ ಕೋರ್ಟ್ ನಲ್ಲಿಯೇ ನಿಮಗೆ ಏನ್ ಬೇಕೋ ನೋಡಿಕೊಳ್ಳಿ ಎಂದು ಕೋರ್ಟ್ ಅವಕಾಶ ನೀಡಿದೆ.
ಈ ವೇಳೆ ಇಂದು ಬೇಡ. ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿ ಎಂದು ಪ್ರಜ್ವಲ್ ಪರ ವಕೀಲರು ಮನವಿ ಮಾಡಿದರು. ಆದರೆ, ಪ್ರಜ್ವಲ್ ರೇವಣ್ಣ ಪರ ವಕೀಲರ ಮನವಿಯನ್ನು ತಿರಸ್ಕರಿಸಿದ ಕೋರ್ಟ್ ನಾಳೆಗೆ ಅವಕಾಶ ನೀಡಿತು.
ಹೀಗಾಗಿ ನಾಳೆ ಕೋರ್ಟ್ ನಲ್ಲಿಯೇ ತನ್ನ ಪೋಟೋ ಹಾಗೂ ವೀಡಿಯೋ ನೋಡಲು ಪ್ರಜ್ವಲ್ ಗೆ ಅವಕಾಶ ನೀಡಲಾಗಿದೆ. ಪ್ರಕರಣದ ವಿಡಿಯೋ, ಪೋಟೋಸ್ ಹಾಗೂ ಟೆಕ್ನಿಕಲ್ ಎವಿಡೆನ್ಸ್ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಪ್ರಜ್ವಲ್ ಹಾಗೂ ಆತನ ವಕೀಲರಿಗೆ ಸಾಕ್ಷಿಗಳ ವೀಕ್ಷಣೆಗೆ ಅವಕಾಶ ನೀಡಲಾಗಿದೆ.