ನಟ ಸೈಫ್ ಅಲಿ ಖಾನ್ ಅಪಾರ್ಟ್ಮೆಂಟ್ ಗೆ ನುಗ್ಗಿದ್ದ ಕಳ್ಳರು ಕನ್ನ ಹಾಕಲು ಪ್ರಯತ್ನಿಸಿ, ಹಲ್ಲೆ ಮಾಡಿರುವ ಘಟನೆ ನಡೆದಿದೆ. ಈಗ ಕೃತ್ಯದ ಹಿಂದಿನ ಕೆಲವು ಮಾಹಿತಿ ಬಹಿರಂಗವಾಗಿವೆ.
ಸದ್ಯದ ಮಾಹಿತಿಯಂತೆ, ಸೈಫ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ಒಬ್ಬರು ಪೊಲೀಸರ ಎದುರು ಕೆಲವು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಫೈರ್ ಎಕ್ಸಿಟ್ ಬಳಸಿಕೊಂಡು ಖದೀಮರು, ಸೈಫ್ ಅಲಿ ಖಾನ್ ಮನೆಗೆ ನುಗ್ಗಿದ್ದರು. ಮಧ್ಯರಾತ್ರಿ 2.30ರ ವೇಳೆಗೆ ಮನೆಯಲ್ಲಿದ್ದವರೆಲ್ಲ ಮಲಗಿದ್ದರು. ಸೈಫ್ ಅಲಿ ಖಾನ್ ಪುತ್ರ ಜೇಹ್ ಅಲಿ ಖಾನ್ (son Jeh Ali Khan) ಮಲಗಿದ್ದ ಕೋಣೆಗೆ ನುಗ್ಗಿದ ಕಳ್ಳನೊಬ್ಬ 1 ಕೋಟಿ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದ ಎಂದು ನರ್ಸ್ ಹೇಳಿದ್ದಾರೆ ಎನ್ನಲಾಗಿದೆ.
ಆಗ ಹಣ ನೀಡಲು ನರ್ಸ್ ನಿರಾಕರಿಸಿದ್ದಾರೆ. ಆಗ ಅವರ ಮೇಲೆ ಕಳ್ಳ ಅಟ್ಯಾಕ್ ಮಾಡಿದ್ದಾನೆ. ಹೀಗಾಗಿ ನರ್ಸ್ ಕೂಡ ಗಾಯಗೊಂಡಿದ್ದಾರೆ. ಖದೀಮ ಚಾಕು ಮತ್ತು ಕೋಲನ್ನು ಹಿಡಿದುಕೊಂಡಿದ್ದ. ಸುಮಾರು 35 ವರ್ಷ ವಯಸ್ಸಿನ ಆ ವ್ಯಕ್ತಿಯ ಚಹರೆ ಹೇಗಿತ್ತು ಎಂಬುವುದನ್ನು ಪೊಲೀಸರ ಎದುರು ನರ್ಸ್ ಹೇಳಿದ್ದಾರೆ. ಈಗಾಗಲೇ ಆತನ ಗುರುತು ಪತ್ತೆ ಆಗಿದ್ದು, ಸದ್ಯದಲ್ಲೇ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.