ಬೀದರ್: ಇಡೀ ರಾಜ್ಯವೇ ಬೆಚ್ಚಿ ಬಿದ್ದಿರುವ ಘಟನೆಯೊಂದು ಜಿಲ್ಲೆಯಲ್ಲಿ ಇಂದು ನಡೆದಿದೆ. ಇಲ್ಲಿನ ಶಿವಾಜಿ ಚೌಕ್ ನಲ್ಲಿರುವ ಬ್ಯಾಂಕ್ ನಲ್ಲಿ ಹಣ ತುಂಬಿಸಿಕೊಂಡು ತೆರಳುತ್ತಿದ್ದ ಸಿಎಂಎಸ್ ಕಂಪನಿ ಸಿಬ್ಬಂದಿಗಳ ಮೇಲೆ ದರೋಡೆಕೋರರು ಗುಂಡಿನ ದಾಳಿ ನಡೆಸಿ, ಹಣ ದೋಚಿ ಪರಾರಿಯಾಗಿದ್ದರು. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಈಗ ಬೆನ್ನಟ್ಟಿ ಸೆರೆ ಹಿಡಿಯಲು ಹೋದ ಪೊಲೀಸರ ಮೇಲೆಯೂ ದಾಳಿ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಹೈದ್ರಾಬಾದ್ ನಲ್ಲಿ ಬೀದರ್ ಪೊಲೀಸರು ಬೆನ್ನಟ್ಟಿ ಹಿಡಿಯಲು ಯತ್ನಿಸಿದ ಸಂದರ್ಭದಲ್ಲಿ ಖದೀಮರು, ಫೈರಿಂಗ್ ಮಾಡಿ ಪರಾರಿಯಾಗಿದ್ದಾರೆ. ಈ ಖದೀಮರು ಹೈದರಾಬಾದ್(Hyderabad) ನತ್ತ ಪರಾರಿಯಾಗಿರುವ ಮಾಹಿತಿ ತಿಳಿಯುತ್ತಿದ್ದಂತೆಯೇ ಬೀದರ್ ಪೊಲೀಸರು ಬೆನ್ನಟ್ಟಿದ್ದಾರೆ. ಆಗ ಹೈದರಾಬಾದ್ ನ ಅಫ್ಜಲ್ ಗಂಜ್ ಪ್ರದೇಶದಲ್ಲಿ ಪತ್ತೆಯಾಗಿದ್ದಾರೆ. ಈ ವೇಳೆ ಪೊಲೀಸರನ್ನು ನೋಡುತ್ತಿದ್ದಂತೆ ಫೈರಿಂಗ್ ಮಾಡಿದ್ದಾರೆ. ಈ ವೇಳೆ ಫೈರ್ ಮಿಸ್ ಆಗಿ, ಖಾಸಗಿ ಬಸ್ ಕ್ಲೀನರ್ ಗೆ ಗುಂಡು ತಗುಲಿದೆ. ಆದರೆ, ಕಳ್ಳರು ಮಾತ್ರ ಪರಾರಿಯಾಗಿದ್ದಾರೆ. ಈಗ ಹೈದ್ರಾಬಾದ್ ಹಾಗೂ ಬೀದರ್ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಕಳ್ಳರು, ಹೈದರಾಬಾದ್ ನಿಂದ ಛತ್ತೀಸ್ ಗಢದ ರಾಯಪುರ್ ಗೆ(Raipur of Chhattisgarh) ತೆರಳಲು ಸಂಚು ರೂಪಿಸಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ ಖಾಸಗಿ ಬಸ್ ಟಿಕೆಟ್ ಬುಕ್ ಮಾಡಿದ್ದರು. ಬೀದರ್ ಪೊಲೀಸರು ಸಹ ಅದೇ ಬಸ್ ಟಿಕೆಟ್ ಬುಕ್ ಮಾಡಿದ್ದರು. ದರೋಡೆ ಮಾಡಿದ್ದ ಹಣದ ಸಮೇತ ಖದೀಮರು ಬಸ್ ನಲ್ಲಿ ಕುಳಿತಿದ್ದಾರೆ. ಆಗ ಖಾಸಗಿ ಟ್ರಾವೆಲ್ಸ್‌ನ ಮ್ಯಾನೇಜರ್ ಬ್ಯಾಗ್ ಚೆಕ್ ಮಾಡಿದ್ದಾರೆ. ಅನುಮಾನ ಬಂದು ದರೋಡೆಕೋರರಿಂದ ಖಾಸಗಿ ಬಸ್‌ನಲ್ಲಿ ಟ್ರಾವೆಲ್ಸ್ ಮ್ಯಾನೇಜರ್ ಜಹಾನ್ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಆನಂತರ ಹಣದ ಸಮೇತ ಪರಾರಿಯಾಗಿದ್ದಾರೆ ಎನ್ನಲಾಗಿದೆ.