ಬೆಂಗಳೂರು: ನಮ್ಮ ಮೆಟ್ರೊ ನೇರಳೆ ಮಾರ್ಗಕ್ಕಾಗಿ ಸಿಲಿಕಾನ್ ಸಿಟಿಗೆ 6 ಕೋಚ್ ಗಳ ಹೊಸ ರೈಲು ಬಂದಿವೆ. ನೇರಳೆ ಮಾರ್ಗಕ್ಕೆಂದು ಆಗಮಿಸುತ್ತಿರುವ ಮೊದಲ ಪ್ರೋಟೋ ಟೈಪ್ ಚಾಲಕ ರಹಿತ ರೈಲು(Prototype driverless train) ಇದಾಗಿದೆ.
ಈ ರೈಲುಗಳು ಚೀನಾದಿಂದ ಆಗಮಿಸಿವೆ. ರೈಲಿನ ಬೋಗಿಗಳನ್ನು ಜೋಡಿಸಿ ನೇರಳೆ ಮಾರ್ಗದಲ್ಲಿ ಪರೀಕ್ಷಾರ್ಥ ಸಂಚಾರ ನಡೆಸಲಾಗುತ್ತಿದೆ. ಈ ವೇಳೆ ವೇಗ,(speed) ಕನಿಷ್ಠ- ಗರಿಷ್ಠ ತೂಕ,(Min- Max Weight) ಸಾಮರ್ಥ್ಯ,(ability) ತುರ್ತು ಸಂದರ್ಭ ನಿರ್ವಹಣೆ ಸೇರಿದಂತೆ ವಿವಿಧ ಪರೀಕ್ಷೆಗಳನ್ನು ಮಾಡಲಾಗುತ್ತಿದೆ.
ಮೆಟ್ರೊ ಚೀನಾದ ಕಂಪನಿ(Chinese company) ಜತೆ ಚಾಲಕ ರಹಿತ ಮೆಟ್ರೊ ರೈಲು ಪೂರೈಕೆಗೆ ಒಧಿಪ್ಪಂದ ಮಾಡಿಕೊಂಡಿದೆ. ಒಟ್ಟು 1,578 ಕೋಟಿ ರೂಪಾಯಿ ವೆಚ್ಚದಲ್ಲಿ ರೈಲುಗಳ ಪೂರೈಕೆಗಾಗಿ ವೆಚ್ಚ ಮಾಡುತ್ತಿದೆ. ಕಂಪನಿಯು 216 ಕೋಚ್ ಅಂದರೆ, 36 ರೈಲುಗಳನ್ನು ನೀಡಬೇಕಿದೆ. ಈ ಪೈಕಿ 15 ಹಳದಿ ಮಾರ್ಗಕ್ಕೆ, ಉಳಿದ 21 ನೇರಳೆ ಹಾಗೂ ಹಸಿರು ಮಾರ್ಗಕ್ಕೆ ಎಂದು ನಿಗದಿ ಮಾಡಲಾಗಿದೆ. ಸದ್ಯ ಹಳದಿ ಮಾರ್ಗಕ್ಕೆ 2 ರೈಲು, ನೇರಳೆ ಮಾರ್ಗಕ್ಕೆ ಒಂದು ರೈಲು ಪೂರೈಸಲಾಗಿದೆ. ಉಳಿದಂತೆ 33 ರೈಲು ಮುಂದಿನ ದಿನಗಳಲ್ಲಿಹಂತ- ಹಂತವಾಗಿ ಬರಲಿವೆ.