ಈ ಬಾರಿ ಬಿಬಿಎಂಪಿ(BBMP) ಟಾರ್ಗೆಟ್ ಮೀರಿ ಆಸ್ತಿ ತೆರಿಗೆ ವಸೂಲಿ ಮಾಡಿದೆ. ಇಲ್ಲಿಯವರೆಗೆ ಶೇ. 83ರಷ್ಟು ಆಸ್ತಿ ತೆರಿಗೆ ವಸೂಲಿ ಮಾಡಿರುವ ಸಾಧನೆ ಮಾಡಿದೆ.
ಬಿಬಿಎಂಪಿ ಇಲ್ಲಿಯವರೆಗೆ 4,370 ಕೋಟಿ ರೂ. ಹಣ ಸಂಗ್ರಹ ಮಾಡಿದೆ. 2024 -25 ರ ತೆರಿಗೆ ವಸೂಲಿ ಮಾಡುವ ಅವಧಿ ಇನ್ನೂ ಎರಡು ತಿಂಗಳು ಬಾಕಿ ಇವೆ. ಇದರ ಮಧ್ಯೆಯೇ ಈಗ ಶೇ. 83ರಷ್ಟು ಆಸ್ತಿ ತೆರಿಗೆಯನ್ನು ವಸೂಲಿ ಮಾಡಲಾಗಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ 5,210 ಕೋಟಿ ರೂ. ಆಸ್ತಿ ತೆರಿಗೆ(Property tax) ವಸೂಲಿ ಮಾಡುವ ಗುರಿ ಹೊಂದಲಾಗಿದೆ. ಇಲ್ಲಿಯವರೆಗೆ 4,370 ಕೋಟಿ ರೂ. ಆಸ್ತಿ ತೆರಿಗೆ ವಸೂಲಿ ಮಾಡಲಾಗಿದೆ.
ಸದ್ಯ ಪ್ರತಿ ವಾರಕ್ಕೆ ಸುಮಾರು 10 ರಿಂದ 13 ಕೋಟಿ ರೂ. ವಸೂಲಿ ಮಾಡಲಾಗುತ್ತಿದೆ. ಹೆಚ್ಚಿನ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಆಸ್ತಿ ಮಾಲೀಕರಿಗೆ ನೋಟಿಸ್ ಕೂಡ ನೀಡಲಾಗಿದೆ. ಅಲ್ಲದೇ, ಆಸ್ತಿ ತೆರಿಗೆ ಕಟ್ಟದ ವಾಣಿಜ್ಯ ಕಟ್ಟಡಗಳನ್ನು ಸೀಜ್ ಮಾಡಲಾಗುತ್ತಿದೆ.
ಇಲ್ಲಿಯವರೆಗೆ ವಲಯವಾರು ಆಸ್ತಿ ತೆರಿಗೆ ಸಂಗ್ರಹವಾಗಿರುವುದನ್ನು ಗಮನಿಸಿದರೆ..
ವಲಯ – ಆಸ್ತಿ ತೆರಿಗೆ ಸಂಗ್ರಹ
ಪಶ್ಚಿಮ ವಲಯ 494..ಕೋಟಿ
ದಕ್ಷಿಣ ವಲಯ -631.ಕೋಟಿ
ಬೊಮ್ಮನಹಳ್ಳಿ – 432.ಕೋಟಿ
ಆರ್ ಆರ್ ನಗರ- 345 ಕೋಟಿ
ಪೂರ್ವ ವಲಯ- 735ಕೋಟಿ
ಮಹಾದೇವಪುರ-1,169 ಕೋಟಿ
ದಾಸರಹಳ್ಳಿ – 139ಕೋಟಿ.
ಯಲಹಂಕ – 422ಕೋಟಿ.
ಒಟ್ಟು – 4370 ಕೋಟಿ ಗಳು..