ಬೆಂಗಳೂರು: ಚಾಲಾಕಿ ಕಳ್ಳನೊಬ್ಬನ ಬಂಧನವಾಗಿದೆ. ನಗರದ ಹಲವು ಕಡೆ ಬೈಕ್ ಕಳ್ಳತನ ಮಾಡುತ್ತಿದ್ದ ಆನಂದ್ ಎಂಬ ಖತರ್ನಾಕ್ ಕಳ್ಳನ ಬಂಧನವಾಗಿದ್ದು, ಬಂಧಿತನಿಂದ 15 ಕ್ಕೂ ಹೆಚ್ಚು ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ. ರಾಜಗೋಪಾಲ ನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ.
ದಿನಾಲೂ ಬೆಳಿಗ್ಗೆ ಮನೆಯಿಂದ ಡ್ಯೂಟಿಗೆ ಹೋಗುವಂತೆ ರೆಡಿಯಾಗಿ ಬರ್ತಿದ್ದ ಆರೋಪಿ ಆನಂದ್, ಮನೆ ಮುಂದೆ ಹಾಗೂ ಪಾರ್ಕ್ ಬಳಿ ನಿಲ್ಲಿಸಿರುತ್ತಿದ್ದ ಬೈಕ್ ಕಳವು ಮಾಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಕಾರ್ಯಾಚರಣೆ ನಡೆಸಿದರಾಜಗೋಪಾಲನಗರ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸದ್ಯ ರಾಜಗೋಪಾಲನಗರ ,ನೆಲಮಂಗಲ ಸೇರಿದಂತೆ ಬೇರೆ-ಬೇರೆ ಠಾಣೆಗಳಲ್ಲಿ ಆರೋಪಿ ಆನಂದ್ ವಿರುದ್ಧ ಪ್ರಕರಣಗಳಿರುವುದು ಬೆಳಕಿಗೆ ಬಂದಿದೆ.