ಬೆಂಗಳೂರು: ಹಸುಗಳ ಕೆಚ್ಚಲು ಕೊಯ್ದ( udders of cows) ಸ್ಥಳದಲ್ಲೇ ಬಿಜೆಪಿ(BJP) ನಾಯಕರು ಗೋವುಗಳ ಪೂಜೆ ಮಾಡಿದ್ದಾರೆ.
ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ನಾಯಕರು, ಘಟನಾ ಸ್ಥಳದಲ್ಲೇ ಪ್ರತಿಭಟನೆ ನಡೆಸಿದ್ದಾರೆ. ಸಂಕ್ರಾಂತಿಯ ಹಿನ್ನೆಲೆಯಲ್ಲಿ ಆ ಸ್ಥಳದಲ್ಲಿ ಗೋಪೂಜೆ ಮಾಡಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್ ಅಶೋಕ್,(R Ashok) ಸಂಸದ ಪಿ.ಸಿ. ಮೋಹನ್, (P.C. Mohan) ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್(Bhaskar Rao) ಸೇರಿದಂತೆ ಹಲವರು ಇದ್ದರು. ಹಸುಗಳ ಕೆಚ್ಚಲು ಕೊಯ್ದ ಜಾಗದಲ್ಲಿ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ,(B.Y. Vijayendra) ಯಾವ ಪುಣ್ಯಭೂಮಿ ಮೇಲೆ ಗೋ ಮಾತೆ ಪೂಜೆ ಮಾಡುತ್ತೇವೋ ಅಂತಹ ಗೋವಿಗೆ ಏನಾಗಿದೆ ಎಂಬುವುದನ್ನು ರಾಜ್ಯ ಹಾಗೂ ದೇಶದ ಜನರು ಗಮನಿಸಿದ್ದಾರೆ. ಇವತ್ತು ಹಸು ಮಾಲೀಕ ಕರ್ಣನಿಗೆ ಧೈರ್ಯ ಹೇಳಿದ್ದೇವೆ. ಗೋ ಮಾತೆ ಪೂಜೆ ಮಾಡುವ ದೇಶದಲ್ಲಿ ಹೀಗೆ ನಡೆದಿರುವುದು ಅಕ್ಷಮ್ಯ ಅಪರಾಧ. ಸಿದ್ದರಾಮಯ್ಯ ಸಿಎಂ ಆದ ಮೇಲೆ ರಾಜ್ಯದಲ್ಲಿ ಗೋ ರಕ್ಷಣೆ ಆಗುತ್ತಿಲ್ಲ. ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಗೆ ಒಳ್ಳೆಯದು ಆಗಲ್ಲ. ಅವರ ಪಾಪದ ಕೊಡ ತುಂಬಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೋ ಬಡಪಾಯಿಗಳನ್ನು ಅರೆಸ್ಟ್ ಮಾಡಿದ್ದಾರೆ. ಹಸು ಮಾಲೀಕ ಕರ್ಣ ಧೈರ್ಯವಾಗಿ ಎದುರಿಸಿದ್ದಾನೆ. ನಾವು ಧೈರ್ಯ ಹೇಳಿ ಗೋ ಪೂಜೆ ಮಾಡಿದ್ದೇವೆ ಎಂದು ಹೇಳಿದ್ದಾರೆ.
ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ಘಟನೆ ನಡೆದ ಕೂಡಲೇ ಸ್ಥಳಕ್ಕೆ ಬಂದಿದ್ದೆ. ರಕ್ತ ಹರಿಯುತ್ತಿತ್ತು. ಕೆಚ್ಚಲು ಕತ್ತರಿಸಿದ್ದನ್ನು ನೋಡಿದ್ದೇನೆ. ಪೊಲೀಸರು ಬಂಧನ ಮಾಡಿರುವವನು ಯಾವಾಗಲೂ ಬ್ಲೇಡ್ ಇಟ್ಟುಕೊಳ್ಳುತ್ತಿದ್ದ ಎಂಬ ಕಾರಣಕ್ಕೆ. ಮನುಷ್ಯತ್ವ ಇರುವವರು ಹೀಗೆ ನಡೆದುಕೊಳ್ಳಲ್ಲ, ಗೋವಿಗೆ ಪೂಜೆ ಮಾಡುವ ಹಬ್ಬ ಇವತ್ತು. ಕಾಂಗ್ರೆಸ್ ಮುಖಂಡರು ನಿನ್ನೆ ಹಸು ತೆಗೆದುಕೋ ಅಂತ ಗಲಾಟೆ ಮಾಡಿದ್ದಾರಂತೆ. ಕಾಂಗ್ರೆಸ್ ನವರು ಒಂದು ಕೈಯಲ್ಲಿ ಕೊಡುವುದು ಮತ್ತೊಂದು ಕಡೆ ಕೊಲೆ ಮಾಡುವುದು. ಗೋವಿನ ಶಾಪ ನಿಮಗೆ ತಟ್ಟದೇ ಬಿಡುವುದಿಲ್ಲ ಎಂದಿದ್ದಾರೆ.
ಜಿಹಾದಿಗಳು ಈ ಕೆಲಸ ಮಾಡಿದ್ದಾರೆ. ಕರ್ಣ ಪಶು ಆಸ್ಪತ್ರೆ(Karna Veterinary Hospital) ಪರವಾಗಿ ಹೋರಾಟ ಮಾಡಿದ್ದ. ಸಿದ್ದರಾಮಯ್ಯ ಆ ಜಾಗವನ್ನು ವಕ್ಫ್ ಬೋರ್ಡ್ ಗೆ ಕೊಟ್ಟಿದ್ದರು. ಅದರ ವಿರುದ್ದ ಕರ್ಣ ಹೋರಾಟ ಮಾಡುತ್ತಿದ್ದ. ಕರ್ಣನಿಗೆ ಏನೂ ಮಾಡಲು ಆಗದೇ ಹಸುವಿಗೆ ಹೀಗೆ ಮಾಡಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಓಲೈಕೆ ಸರ್ಕಾರ, ಮುಸ್ಲಿಂಮರಿಗೆ ಏನಾದರೂ ಆಗಿದ್ದರೆ ಸಿದ್ದರಾಮಯ್ಯ ಪಂಚೆ ಎತ್ತುಕೊಂಡು ಬರುತ್ತಿದ್ದರು. ಧರ್ಮ ಯುದ್ದ ಇದು. ನಾವು ಧರ್ಮ ಯುದ್ದಕ್ಕೆ ಚಾಲನೆ ಕೊಟ್ಟಿದ್ದೇವೆ. ಸಿದ್ದರಾಮಯ್ಯ ಹಿಂದುಗಳಿಗೆ ಎರಡು ಮಕ್ಕಳನ್ನು ಮಾಡಿಕೊಳ್ಳಿ ಸಾಕು ಅಂತಾರೆ. ಅದನ್ನೇ ಮುಸ್ಲಿಂರಿಗೆ ಹೇಳಿ ನೋಡೋಣ? ಮುಸ್ಲಿಮರು 50 ಮಕ್ಕಳು ಮಾಡಿಕೊಳ್ಳಬಹುದಾ? ಮುಸ್ಲಿಮರು 4-5 ಮದುವೆ ಆಗಬಹುದಾ..? ಎಂದು ಪ್ರಶ್ನಿಸಿದ್ದಾರೆ.