ಬೆಂಗಳೂರು: ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್(South United Football Club) ಆಯೋಜಿಸಿದ್ದ ಇಂಟರ್-ಸಿಟಿ ಪಂದ್ಯಾವಳಿ ಯಶಸ್ವಿಯಾಗಿ ನೆರವೇರಿದೆ. ಬೆಂಗಳೂರಿನ ಹಲಸೂರಿನಲ್ಲಿರುವ ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ನಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ ಸೌತ್ ಯುನೈಟೆಡ್ ಫುಟ್‌ಬಾಲ್ ಅಕಾಡೆಮಿಯ ಬೆಂಗಳೂರು ಮತ್ತು ಪುಣೆಯ ಮಕ್ಕಳು ಪರಸ್ಪರ ಸ್ಪರ್ಧಿಸಿದ್ದಾರೆ.
ಈ ಇಂಟರ್ ಸಿಟಿ ಪಂದ್ಯಾವಳಿಯಲ್ಲಿ ಪುಣೆ ಮತ್ತು ಬೆಂಗಳೂರಿನಿಂದ ಸುಮಾರು 250 ಯುವ ಫುಟ್ಬಾಲ್ ಆಟಗಾರರು ಭಾಗವಹಿಸಿದ್ದರು. ಪುಣೆ ತಂಡಗಳು ಐದು ವಿಭಾಗಗಳಲ್ಲಿ ನಾಲ್ಕು ಪ್ರಶಸ್ತಿಗಳನ್ನು ಗೆದ್ದರೆ, ಬೆಂಗಳೂರು ತಂಡ ಒಂದು ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಪುಣೆ ತಂಡ ಅಡರ್-9, ಅಡರ್-11, ಅಡರ್-13, ಮತ್ತು ಅಡರ್-15 ನಲ್ಲಿ ಪ್ರಶಸ್ತಿಗಳನ್ನು ಗೆದಿದ್ದು, ಅಂಡರ್-17 ನಲ್ಲಿ ಬೆಂಗಳೂರಿನ ಎಸ್‌ಯುಎಫ್‌ಸಿ ಪಿಲ್ಲರ್ಸ್ ಜಯ ಸಾಧಿಸಿದೆ. ಜೊತೆಗೆ ಪುಣೆ ತಂಡವು ಅತ್ಯುತ್ತಮ ಗೋಲ್ ಕೀಪರ್, ಉದಯೋನ್ಮುಖ ಆಟಗಾರ ಹಾಗು ಅತ್ಯುತ್ತಮ ಕೋಚ್ ಗಳಿಗೆ ವೈಯಕ್ತಿವಾಗಿ ನೀಡಿದ ಪ್ರಶಸ್ತಿಗಳನ್ನು ಕೂಡ ತಮ್ಮದಾಗಿಸಿಕೊಂಡಿದೆ.

ವೈಯಕ್ತಿಕ ಪ್ರಶಸ್ತಿಗಳ ಪಟ್ಟಿ:
ಅಂಡರ್-9
ಅತ್ಯುತ್ತಮ ಗೋಲ್ ಕೀಪರ್: ಅಗಸ್ತ್ಯ ಸುರೇಶ್ (ಬೆಂಗಳೂರು)
ಅತ್ಯುತ್ತಮ ಆಟಗಾರ: ಏಕಂ ಸಿಂಗ್ (ಪುಣೆ)
ಉದಯೋನ್ಮುಖ ಆಟಗಾರ: ಆಸ್ಟಿನ್ ಲೋರೀಗ್ಗಿಯೋ (ಬೆಂಗಳೂರು), ನೋರಾ ಗುಪ್ತ (ಪುಣೆ)
ಅತ್ಯುತ್ತಮ ಕೋಚ್: ರಿಯಾನ್ ಯಾದಗಿರಿ (ಪುಣೆ), ನವೀನ್ ಕುಮಾರ್ (ಬೆಂಗಳೂರು)
ಅಂಡರ್-11
ಅತ್ಯುತ್ತಮ ಗೋಲ್ ಕೀಪರ್: ಅರ್ಹತ್ವ ಡೋಂಗ್ರೆ (ಪುಣೆ)
ಅತ್ಯುತ್ತಮ ಆಟಗಾರ: ಅವ್ಯುಕ್ತ್ ನಂದಿ (ಪುಣೆ)
ಉದಯೋನ್ಮುಖ ಆಟಗಾರ: ಕಬೀರ್ ದೂತ್ (ಪುಣೆ), ಶನಯಾ (ಬೆಂಗಳೂರು)
ಅತ್ಯುತ್ತಮ ಕೋಚ್: ಪ್ರತಿಕ್ಷ ದೇವಾಂಗ್ (ಪುಣೆ), ಉಮಾಶಂಕರ್ (ಬೆಂಗಳೂರು)
ಅಂಡರ್-13
ಅತ್ಯುತ್ತಮ ಗೋಲ್ ಕೀಪರ್: ದಿಯಾನ್ ಗೋಯಲ್ (ಪುಣೆ)
ಅತ್ಯುತ್ತಮ ಆಟಗಾರ: ಜೆಡೆನ್ ಜೋಸೆಫ್ (ಬೆಂಗಳೂರು)
ಉದಯೋನ್ಮುಖ ಆಟಗಾರ: ಡೆಲಿಝ ಉನ್ವಾಲ (ಬೆಂಗಳೂರು)
ಅತ್ಯುತ್ತಮ ಕೋಚ್: ಪ್ರಬುದ್ಧ ಗೈಕ್ವಾಡ್ (ಪುಣೆ), ಅದಿತಿ ಪಿ ಜಾಧವ್ (ಬೆಂಗಳೂರು)
ಅಂಡರ್-15
ಅತ್ಯುತ್ತಮ ಗೋಲ್ ಕೀಪರ್: ಸಿದ್ದಾರ್ಥ್ ಗುಪ್ತ (ಬೆಂಗಳೂರು)
ಅತ್ಯುತ್ತಮ ಆಟಗಾರ: ಅರ್ಪಿತ್ ಮಿಶ್ರಾ (ಪುಣೆ)
ಅತ್ಯುತ್ತಮ ಕೋಚ್: ಸಿದ್ದಾರ್ಥ್ ಮಿಶ್ರಾ (ಬೆಂಗಳೂರು), ಮೊಹಸಿನ್ ಅಬ್ದುಲ್ಲಾ ತಂಬೋಲಿ (ಪುಣೆ)
ಅಂಡರ್-17
ಅತ್ಯುತ್ತಮ ಆಟಗಾರ: ಹರ್ಷಿತ್ ಎಸ್ ವಿ (ಬೆಂಗಳೂರು)

ಸೌತ್ ಯುನೈಟೆಡ್ ಸ್ಪೋರ್ಟ್ಸ್ ಫೌಂಡೇಶನ್‌ನ ಕ್ರೀಡಾ ನಿರ್ದೇಶಕ ಟೆರಿ ಫಿಲನ್ ಮಾತನಾಡಿ ‘ ಈ ಪಂದ್ಯಾವಳಿಯ ಉದ್ದೇಶ ಬೆಂಗಳೂರಿನಲ್ಲಿ ಯುವ ಆಟಗಾರರನ್ನು ಒಂದುಗೂಡಿಸುವುದು ಜೊತೆಗೆ ಇಂಟರ್-ಸಿಟಿ ಪಂದ್ಯಾವಳಿಯ ಅನುಭವವನ್ನು ನೀಡುವುದಾಗಿತ್ತು. ಆಟಗಾರರು, ಕೋಚ್ ಗಳು ಮತ್ತು ಪೋಷಕರು ಈ ಪಂದ್ಯಾವಳಿಯನ್ನು ಆನಂದಿಸಿದ್ದಾರೆ. ನಾಳವು ತಮಟ್ಟದಿಂದ ಫುಟ್ಬಾಲ್ ಆಟವನ್ನು(Football game) ಬೆಳೆಸಲು ಪ್ರಯತ್ನಿಸುತ್ತಿದ್ದೇವೆ ಹಾಗು BDFA ಲೀಗ್‌ನಲ್ಲಿ ಆಡುವ ಮೊದಲ ತಂಡವನ್ನು ಕೂಡ ಪಡೆದುಕೊಂಡಿದ್ದೇವೆ. ಪುಣೆ ತಂಡವು ಬೆಂಗಳೂರು ಬಂದಿದ್ದು ಸಂತಸ ನೀಡಿದೆ. ಆಟಗಾರರಿಗೆ ಕ್ರೀಡೆ ಮಾನಸಿಕವಾಗಿ, ದೈಹಿಕವಾಗಿ ಸಹಾಯ ಮಾಡುತ್ತದೆ. ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಅದ್ಭುತ ವಸತಿ ಅಕಾಡೆಮಿಯನ್ನು ಕೂಡ ನಿರ್ಮಿಸುತ್ತಿದ್ದು, ಕಳೆದ ಕೆಲವು ವರ್ಷಗಳಿಂದ ಕ್ಲಬ್ ಕಂಡ ಬೆಳವಣಿಗೆಯು ಅಪಾರವಾಗಿದೆ ಎಂದರು.
ಈ ಪಂದ್ಯಾವಳಿಯು ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ನ ಹೊಸ ವಸತಿ ಅಕಾಡೆಮಿ ಕಾರ್ಯಕ್ರಮಕ್ಕೆ ಸ್ಕೌಟಿಂಗ್ ವೇದಿಕೆಯಾಗಿ ಕೂಡ ಕಾರ್ಯನಿರ್ವಹಿಸಿದ್ದು, ಅತ್ಯುತ್ತಮ ಆಟಗಾರರು ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗುವ ಅವಕಾಶವನ್ನು ಪಡೆದುಕೊಂಡಿದ್ದಾರೆ.