ಸಮಾಜದಲ್ಲಿ ಎಂತೆಂಥ ಕಿಲಾಡಿಗಳು ಇರತ್ತಾರೆ ಅಂದ್ರೆ ನಂಬುವುದು ಕೂಡ ಅಸಾಧ್ಯವಾಗಿರುತ್ತದೆ. ಇಲ್ಲೋರ್ವ ಮಹಿಳೆ ಫೈನ್ ತಪ್ಪಿಸಿಕೊಳ್ಳಲು ತಮ್ಮ ಕಿಲಾಡಿತನ ಪ್ರದರ್ಶಿಸಿ, ಪೊಲೀಸರೂ ಶಾಕ್ ಆಗುವಂತೆ ಮಾಡುವಂತೆ ಮಾಡಿದ್ದಾರೆ.
ಮಹಿಳೆಯ ಕಿಲಾಡಿತನ ಟ್ರಾಫಿಕ್ ಪೊಲೀಸರ ಕ್ಯಾಮೆರಾ ಕಣ್ಣಿಗೆ ಸವಾಲ್ ಹಾಕುವಂತಿದೆ. ನಂಬರ್ ಪ್ಲೇಟ್ ಪೊಲೀಸರಿಗೆ ಕಾಣಿಸಬಾರದು ಎಂಬ ಕಾರಣಕ್ಕೆ ಮಹಿಳೆ ಕಾಲಿನ ಪಾದದಿಂದ ಕವರ್ ಮಾಡಿದ್ದಾರೆ. ಇತ್ತೀಚೆಗೆ ಸ್ಪೂನ್ ನಿಂದ ನಂಬರ್ ಪ್ಲೇಟ್ ಮುಚ್ಚಿದ್ದ ಪ್ರಸಂಗ ಬೆಳಕಿಗೆ ಬಂದಿತ್ತು.
ಒಂದು ನಂಬರ್ ಕಾಣದಂತೆ ಅಳಿಸಿರುವುದೂ ಕಂಡು ಬಂದಿತ್ತು. ಆದರೆ, ಈಗ ಮಹಿಳೆಯೊಬ್ಬರು ಬೈಕ್ ನಲ್ಲಿ ಕೂತು ಪಾದದಲ್ಲಿ ನಂಬರ್ ಪ್ಲೇಟ್ ಮರೆ ಮಾಚಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯಾವ ಪ್ರದೇಶದು ಎಂಬುವುದು ಮಾತ್ರ ಬಹಿರಂಗವಾಗಿಲ್ಲ. ಈ ಫೋಟೋ ನೋಡಿ ಪೊಲೀಸರು ಮಾತ್ರ ದಂಗಾಗಿದ್ದಾರೆ.