ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಕಲಹ ಹಾದಿ -ಬೀದಿಗೆ ಬಂದು ನಿಂತು ಬಿಟ್ಟಿದೆ. ಈಗ ಆ ಪಕ್ಷದಲ್ಲಿ ಮನೆಯೊಂದು ಮೂರು ಬಾಗಿಲು ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ.
ಮಾಜಿ ಸಿಎಂ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದ ಜಗದೀಶ ಶೆಟ್ಟರ್ ಶುಕ್ರವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ರಾಜ್ಯದಲ್ಲಿನ ಸ್ಥಿತಿಗತಿಗಳ ಬಗ್ಗೆ ವಿವರಿಸಿದ್ದಾರೆ ಎನ್ನಲಾಗಿದೆ.
“ಕರ್ನಾಟಕ ನ್ಯೂಸ್ ಬೀಟ್” ನಲ್ಲಿ ಜಗದೀಶ್ ಶೆಟ್ಟರ್, ಮೋದಿ ಭೇಟಿಯ Exclusive ಮಾಹಿತಿ ನೀಡುತ್ತಿದ್ದೇವೆ.
- ರಾಜ್ಯ ಬಿಜೆಪಿಯಲ್ಲಿನ ಸ್ಥಿತಿ ಸರಿಯಾಗಿಲ್ಲ.
- ಇಲ್ಲಿ ಮನೆಯೊಂದು ಮೂರು ಬಾಗಿಲಾಗಿದೆ.
- ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕರ ನಡುವೆ ಸಮನ್ವಯತೆ ಇಲ್ಲ.
- ಯಾವುದೇ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ತಲುಪಿಸುತ್ತಿಲ್ಲ.
- ಯತ್ನಾಳ್ ಬಣದ ನಡೆ ಪಕ್ಷದ ವರ್ಚಸ್ಸಿಗೆ ಡ್ಯಾಮೇಜ್ ಮಾಡುತ್ತಿದೆ.
- ಇದೆಲ್ಲವನ್ನು ಸರಿಪಡಿಸುವ ನಿಟ್ಟಿನಲ್ಲಿ ಹೈಕಮಾಂಡ್ ನಾಯಕರು ಮುಂದಾಗಬೇಕು.
- ಸದ್ಯದಲ್ಲೇ ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತಿ ಚುನಾವಣೆ ಎದುರಾಗಲಿದೆ.
- ಈ ಸಂದರ್ಭದಲ್ಲಿ ಗೊಂದಲಗಳು ನಿರ್ಮಾಣವಾದರೆ ವಾತಾವರಣ ಸರಿ ಇರುವುದಿಲ್ಲ.
- ಈ ಗೊಂದಲಗಳಿಂದಾಗಿ ಶಾಸಕರುಗಳು ಹಾಗೂ ವಿಧಾನಪರಿಷತ್ ಸದಸ್ಯರಲ್ಲೂ ಉತ್ಸಾಹ ಕಾಣುತ್ತಿಲ್ಲ.
- ಇದು ಹೀಗೆ ಮುಂದುವರೆದರೆ, 2028 ರ ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲೂ ನಮಗೆ ಹಿನ್ನಡೆಯಾಗಬಹುದು.
ಹೀಗಾಗಿ ಪಕ್ಷಕ್ಕೆ ದೊಡ್ಡ ಹಿನ್ನೆಡೆಯಾಗುವುದುಕ್ಕೂ ಮುನ್ನವೇ ಹೈಕಮಾಂಡ್ ನಾಯಕರು ಕೂಡಲೇ ಮಧ್ಯೆ ಪ್ರವೇಶಿಸಿ ಗೊಂದಲಕ್ಕೆ ಬ್ರೇಕ್ ಹಾಕಬೇಕು ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.