ಬೆಂಗಳೂರು: ಸಂದರ್ಶನಕ್ಕೆ ಬಂದಿದ್ದ ಯುವಕ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಮಹದೇವಪುರ ಪೊಲೀಸ್ ಠಾಣೆ (police station) ವ್ಯಾಪ್ತಿಯ ಹೂಡಿ ಬಳಿ ಈ ಘಟನೆ ನಡೆದಿದೆ. ಕೇರಳ ಮೂಲದ ಜಿತಿನ್ ಬೆನ್ನಿ (29) (Jitin Benny) ಆತ್ಮಹತ್ಯೆಗೆ ಯತ್ನಿಸಿರುವ ಯುವಕ. ಜಿತಿನ್ ತಂದೆಗೆ ಕ್ಯಾನ್ಸರ್ ಇರುವುದರಿಂದಾಗಿ ಸಾಕಷ್ಟು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ. ತಂದೆಯ ಚಿಕಿತ್ಸೆಗೆ ಹಣ ಹೊಂದಿಸಲು ಜಿತಿನ್ ಒದ್ದಾಡುತ್ತಿದ್ದ. ಹೀಗಾಗಿ ಬೆಂಗಳೂರಿಗೆ ಕೆಲಸ ಅರಿಸಿ ಬಂದಿದ್ದ.
ಈ ಹಿನ್ನೆಲೆಯಲ್ಲಿ ಹೂಡಿ ಬಳಿಯ ಪಿಜಿಯೊಂದರಲ್ಲಿ ಉಳಿದುಕೊಂಡಿದ್ದ. ಜಿತಿನ್ ಲುಲು ಮಾಲ್ ಗೆ ಸಂದರ್ಶನಕ್ಕೆಂದು ಬಂದಿದ್ದ. ಆದರೆ, ಆರ್ಥಿಕ ಸಮಸ್ಯೆಯ ಒತ್ತಡದಿಂದಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಮಹದೇವಪುರ ಪೊಲೀಸರಿಗೆ ಜಿತಿನ್ ಸ್ನೇಹಿತ ಮಾಹಿತಿ ನೀಡಿದ್ದಾರೆ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಜಿತಿನ್ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಳಕ್ಕೆ ಆಗಮಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸದ್ಯ ಎಮರ್ಜೆನ್ಸಿ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.