ಬೆಂಗಳೂರು : ನಿಸ್ಸಾನ್ ಮೋಟಾರ್ ಇಂಡಿಯಾ ಕಂಪನಿಯು ರಕ್ಷಣಾ ಪಡೆ (ಭಾರತೀಯ ಸೇನೆ, ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆ), ಕೇಂದ್ರ ಮತ್ತು ರಾಜ್ಯ ಪೊಲೀಸ್ ಸಿಬ್ಬಂದಿಗಳಿಗೆ ಗಣರಾಜ್ಯೋತ್ಸವದ ಪ್ರಯುಕ್ತ ‘ಬೋಲ್ಡ್ ಫಾರ್ ದಿ ಬ್ರೇವ್’ ಎಂಬ ಯೋಜನೆಯ ಮೂಲಕ ತನ್ನ ಅತಿ ಹೆಚ್ಚು ಮಾರಾಟವಾಗುವ ಎಸ್‌ಯುವಿ ಹೊಸ ನಿಸ್ಸಾನ್ ಮ್ಯಾಗ್ನೈಟ್ ಮೇಲೆ ಭಾರಿ ರಿಯಾಯಿತಿ ಪ್ರಯೋಜನಗಳನ್ನು ಘೋಷಿಸಿದೆ.
ಸಿಎಸ್‌ಡಿ ಎಎಫ್‌ಡಿ ಪೋರ್ಟಲ್ (www.afd.csdindia.gov.in) ಮೂಲಕ ನಿಸ್ಸಾನ್ ಮ್ಯಾಗ್ನೈಟ್ ಅನ್ನು ಬುಕ್ ಮಾಡುವ ವೇಳೆ ರೂ.72,000 ರಿಂದ ರೂ.1 ಲಕ್ಷದವರೆಗಿನ ರಿಯಾಯಿತಿ ಪ್ರಯೋಜನ ಪಡೆಯಬಹುದು ಎಂದು ಕಂಪನಿ ಪ್ರಕಟಿಸಿದೆ.
31 ಜನವರಿ 2025ರವರೆಗೆ ಮಾಡಲಾಗುವ ಬುಕಿಂಗ್ ಗಳಿಗೆ ಮಾತ್ರ ಈ ಪ್ರಯೋಜನ ಲಭ್ಯ. ಗ್ರಾಹಕರ ಅನುಕೂಲಕ್ಕಾಗಿ ಮತ್ತು ಬುಕಿಂಗ್ ಹಾಗೂ ಡೆಲಿವರಿ ವಿವರ ತಿಳಿಯಲು ನಿಸ್ಸಾನ್ ವಿಶೇಷ 24×7 ಸಹಾಯವಾಣಿಯನ್ನು ಕೂಡ ಸ್ಥಾಪಿಸಿದೆ.

ಸಿಎಸ್‌ಡಿ ಎಎಫ್‌ಡಿ ಪೋರ್ಟಲ್ (www.afd.csdindia.gov.in) ಮೂಲಕ ಬುಕ್‌ಮಾಡುವ ವೇಳೆ ಲಭ್ಯವಿರುವ ಲಾಭಾಂಶ ಮತ್ತು ತೆರಿಗೆ ಪ್ರಯೋಜನ ಪಡೆಯಬಹುದು. ನಿಸ್ಸಾನ್ ಭಾರತದಾದ್ಯಂತ ಇರುವ ಕೇಂದ್ರ ಅರೆಸೈನಿಕ ಮತ್ತು ರಾಜ್ಯ ಪೊಲೀಸ್ ಪಡೆಗಳ ಎಲ್ಲಾ ಸಿಬ್ಬಂದಿಗೆ ಈ ಪ್ರಯೋಜನಗಳನ್ನು ನೀಡುತ್ತಿದೆ.
2020ರ ಡಿಸೆಂಬರ್‌ನಲ್ಲಿ ಭಾರತದಲ್ಲಿ ಬಿಡುಗಡೆಯಾದಾಗಿನಿಂದ ನಿಸ್ಸಾನ್ ಮ್ಯಾಗ್ನೈಟ್ ನ ಒಟ್ಟು 1.5 ಲಕ್ಷ ಯುನಿಟ್‌ಗಳು ಮಾರಾಟವಾಗಿದ್ದು ಭಾರಿ ಜನಪ್ರಿಯತೆ ಗಳಿಸಿದೆ. 2024ರ ಅಕ್ಟೋಬರ್ ನಲ್ಲಿ ಹೊಸ ನಿಸ್ಸಾನ್ ಮ್ಯಾಗ್ನೈಟ್ ಬಿಡುಗಡೆ ಆದಾಗಿನಿಂದ 10,000ಕ್ಕೂ ಹೆಚ್ಚು ಬುಕಿಂಗ್‌ಆಗಿರುವುದು ವಿಶೇಷ..
ಈ ಕುರಿತು ಮಾತನಾಡಿರುವ ನಿಸ್ಸಾನ್ ಮೋಟಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸೌರಭ್(Saurabh Vatsa) ವತ್ಸಾ ಅವರು, “76 ಗಣರಾಜ್ಯೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಸಶಸ್ತ್ರ ಪಡೆಗಳು, ಕೇಂದ್ರ ಅರೆಸೇನಾಪಡೆ ಮತ್ತು ರಾಜ್ಯ ಪೊಲೀಸ್ ಪಡೆಗಳಿಗೆ ಭಾರಿ ರಿಯಾಯಿತಿ ದರದಲ್ಲಿ ಹೊಸ ನಿಸ್ಸಾನ್ ಮ್ಯಾಗ್ನೈಟ್ ಅನ್ನು ಒದಗಿಸುತ್ತಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ರಾಷ್ಟ್ರವನ್ನು ರಕ್ಷಿಸುವ ಯೋಧರ ಬದ್ಧತೆ, ದೇಶಪ್ರೇಮ ಮತ್ತು ತ್ಯಾಗಕ್ಕೆ ಇದು ನಾವು ಸಲ್ಲಿಸುತ್ತಿರುವ ಗೌರವ ಮತ್ತು ಕೃತಜ್ಞತೆ” ಎಂದು ಹೇಳಿದರು.
ಈ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಗ್ರಾಹಕರು ನಿಸ್ಸಾನ್ ಮೋಟಾರ್ ಇಂಡಿಯಾ ‘ಬೋಲ್ಡ್ ಫಾರ್ ದಿ ಬ್ರೇವ್’ (Bold for the Brave) ರಿಪಬ್ಲಿಕ್ ಬೊನಾಂಜಾ ಡಿಫೆನ್ಸ್ ಆಂಡ್ ಸೆಕ್ಯುರಿಟಿ ಫೋರ್ಸಸ್ 24×7 ವಿಶೇಷ ಸಹಾಯವಾಣಿಯನ್ನು +91 1800-209-3456 ನಲ್ಲಿ ಸಂಪರ್ಕಿಸಬಹುದು.