ದಾವಣಗೆರೆ: ಬ್ರಿಡ್ಜ್ ಗೆ ಆಗ್ರಹಿಸಿ ಜಿಲ್ಲೆಯ ಹಳೇ ಕುಂದುವಾಡ(kunduvada) ಗ್ರಾಮಸ್ಥರು ಬೃಹತ್ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.
ಈ ಮಧ್ಯೆ ಅಧಿಕಾರಿಗಳು ಹಾಗೂ ಗ್ರಾಮಸ್ಥರ ಮಧ್ಯೆ ವಾಗ್ವಾದ ನಡೆದಿದೆ. ಪ್ರತಿಭಟನೆ(protest) ಉಗ್ರ ಸ್ವರೂಪ ಪಡೆಯುತ್ತಿದ್ದಂತೆ 50ಕ್ಕೂ ಅಧಿಕ ಜನ ಮುಖಂಡರನ್ನು ಪೊಲೀಸರು(police) ವಶಕ್ಕೆ ಪಡೆದಿದ್ದಾರೆ.
ದಾವಣಗೆರೆ ನಗರದ ಹಳೇ ಕುಂದುವಾಡ ರಾಷ್ಟ್ರೀಯ ಹೆದ್ದಾರಿ(national highway) ಬಳಿ ಈ ಘಟನೆ ನಡೆದಿದೆ. ಈ ವೇಳೆ ಎಸಿ, ತಹಸೀಲ್ದಾರ್ ಹಾಗೂ ಗ್ರಾಮಸ್ಥರ ಮಧ್ಯೆ ವಾಗ್ವಾದ ನಡೆದಿದೆ. ಹಿಂದೆ ಎರಡು ಬಾರಿ ಅವೈಜ್ಞಾನಿಕವಾಗಿ ಬ್ರಿಡ್ಜ್ ಗಳನ್ನು ನಿರ್ಮಿಸಲಾಗಿದೆ. ಎರಡು ಬ್ರಿಡ್ಜ್ ಹೊಡೆದು ಈಗ ಮತ್ತೆ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಸಲಾಗುತ್ತಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಅಲ್ಲದೇ, ಹಳೇ ಕುಂದುವಾಡ-ಬನ್ನಿಕೋಡ ಮಾರ್ಗಕ್ಕೆ ನೇರ ಬ್ರಿಡ್ಜ್ (bridge)ನಿರ್ಮಾಣ ಮಾಡುವಂತೆ ಪಟ್ಟು ಹಿಡಿದರು. ಹರಿಹರ, ಶಿವಮೊಗ್ಗ ರಾಜ್ಯ ಹೆದ್ದಾರಿಗೆ ಈ ಬ್ರಿಡ್ಜ್ ಮುಖ್ಯ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿರುವ ಹಿನ್ನೆಲೆಯಲ್ಲಿ 80 ಅಡಿ ನೇರ ಬ್ರಿಡ್ಜ್ ಮಾಡಬೇಕೆಂದು ಪಟ್ಟು ಹಿಡಿದರು. ಸ್ಥಳಕ್ಕೆ ಎಎಸ್ಪಿ ವಿಜಯಕುಮಾರ್ ಸಂತೋಷ್,(Vijayakumar Santosh) ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ (Mallesh Dodmani) ಆಗಮಿಸಿ ಪರಿಶೀಲನೆ ನಡೆಸಿದರು.