ಉತ್ತರ ಪ್ರದೇಶದ ಮೀರತ್ ನಲ್ಲಿ ಅವಿವಾಹಿತರಿಗೆ ರೂಮ್ ನೀಡದಂತೆ ಓಯೋ ಆದೇಶ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯಕ್ಕೂ ಈ ನಿಯಮ ಜಾರಿಯಾಗಲಿ ಎಂದು ಭಜರಂಗದಳ ಮನವಿ ಮಾಡಿದೆ.
ಬೆಂಗಳೂರಿನಲ್ಲೂ ಇಂತಹ ನಿರ್ಧಾರ ಕೈಗೊಳ್ಳುವಂತೆ ಭಜರಂಗದಳ ಮನವಿ ಮಾಡಿದೆ. ಈ ಕುರಿತು ಬಿಬಿಎಂಪಿ ಆಯುಕ್ತರು, ಪೊಲೀಸ್ ಕಮಿಷನರ್ ಗೆ ಭಜರಂಗದಳ ಕಾರ್ಯಕರ್ತರು ಮನವಿ ಮಾಡಿದ್ದಾರೆ.
ಹೋಂ ಸ್ಟೇ, ಲಾಡ್ಜ್, ಸರ್ವೀಸ್ ಅಪಾರ್ಟ್ಮೆಂಟ್ ಗಳು, ಹೋಟೆಲ್ ಗಳಲ್ಲಿ ಅವಿವಾಹಿತರಿಗೆ ಅವಕಾಶ ನೀಡಬಾರದು.
ಅವಿವಾಹಿತರಿಗೆ ತಂಗಲು ಅವಕಾಶ ನೀಡುವುದರಿಂದ ತಪ್ಪು ದಾರಿ ಹಿಡಿಯುವ ಸಾಧ್ಯತೆ ಇರುತ್ತದೆ. ಕೆಲವರು ಎಲ್ಲೇ ಮೀರಿ ವರ್ತಿಸುವ ಸಾಧ್ಯತೆಗಳಿವೆ. ಇದರಿಂದ ಆ ಸ್ಥಳಗಳಿಗೆ ಧಕ್ಕೆ ಉಂಟಾಗಿ, ಪವಿತ್ರ ಸ್ಥಳಗಳು ಅನೈತಿಕ ಚಟುವಟಿಕೆ ತಾಣವಾಗುವ ಸಾಧ್ಯತೆ ಇದೆ. ಹೀಗಾಗಿ ಈ ನಿಯಮವನ್ನು ಕೂಡ ರಾಜ್ಯದಲ್ಲಿ ಗಂಭೀರವಾಗಿ ಜಾರಿಗೆ ತರಬೇಕು ಎಂದು ಮನವಿ ಮಾಡಿದ್ದಾರೆ.