ಮಕ್ಕಳನ್ನು ಶಾಲೆಗೆ ಡ್ರಾಪ್ ಮಾಡುವಾಗ ಪಾಲಕರು ಎಚ್ಚರಿಕೆಯಿಂದ ಇರಬೇಕು. ಇಲ್ಲವಾದರೆ, ದೊಡ್ಡ ಅನಾಹುತಗಳಾಗುತ್ತವೆ ಎಂಬುವುದಕ್ಕೆ ಇಲ್ಲೊಂದು ಘಟನೆ ನಡೆದಿದೆ.
ಹಗದೂರು ಮುಖ್ಯ ರಸ್ತೆ ವೈಟ್ ಫೀಲ್ಡ್ ನಲ್ಲಿ ಈ ಘಟನೆ ನಡೆದಿದೆ. ಪಾಲಕರೊಬ್ಬರು ತಮ್ಮ ಮಗನನ್ನು ಶಾಲೆಗೆ ಡ್ರಾಪ್ ಮಾಡಲು ಹೋಗುತ್ತಿದ್ದ ಸಂದರ್ಭದಲ್ಲಿ ಟ್ರ್ಯಾಕ್ಟರ್ ಓವರ್ ಟೇಕ್ ಮಾಡಲು ಯತ್ನಿಸಿದಾಗ ಅಪಘಾತವಾಗಿದೆ. ಆಗ ಅಲ್ಲಿಯೇ ಸಾಗುತ್ತಿದ್ದ ಟ್ಯಾಂಕರ್ ನ ಚಕ್ರದ ಅಡಿ ಮಗ ಬಿದ್ದಿದ್ದು, ಆತನ ತಲೆಯ ಮೇಲೆ ವಾಹನ ಹರಿದಿದೆ. ಪರಿಣಾಮ 10 ವರ್ಷದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ 100 ಮೀಟರ್ ಅಂತರದಲ್ಲಿ ವಿದ್ಯಾರ್ಥಿ ಓದುತ್ತಿದ್ದ ಕಾರ್ಮೆಲ್ ಥೆರಸಾ ಶಾಲೆ ಇದ್ದು, ಬಾಲಕ ಸಾವಿಗೆ ಇಡಿ ಶಾಲೆ ಕಂಬನಿ ಮಿಡಿದಿದೆ. ಸ್ಥಳದಲ್ಲೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.