ಬಿಬಿಎಂಪಿ ಕಚೇರಿಯ ಮೇಲೆ ಇಡಿ ಅಧಿಕಾರಿಗಳು ನಮ್ಮನ್ನು ಕೇಳಿ ದಾಳಿ ಮಾಡಿಲ್ಲ. ಯಾವ ಉದ್ಧೇಶಕ್ಕೆ ದಾಳಿ ನಡೆದಿದೆಯೋ ಗೊತ್ತಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಬಂದ ಮಾಹಿತಿ ಪ್ರಕಾರ ಬಿಬಿಎಂಪಿಗೆ ಕೇಂದ್ರದಿಂದ ಬಂದ ಅನುದಾನ ದುರ್ಬಳಕೆಯಾಗಿದೆ ಎಂಬ ಆರೋಪ ಇದೆ. ಹೀಗಾಗಿ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಈ ಪ್ರಕರಣದ ಕುರಿತು ವಿಚಾರ ಮಾಡುತ್ತೇನೆ. ನೆನಪಿಸಿದ್ದು ಒಳ್ಳೆಯದಾಯಿತು. ಯಾವ ಕಾರಣಕ್ಕೆ ನಿಧಾನವಾಯಿತು ಎಂದು ಪರಿಶೀಲನೆ ನಡೆಸುತ್ತೇನೆ ಎಂದಿದ್ದಾರೆ.