ಬೀದರ್: ಬಿಜೆಪಿಯವರ ಯಡವಟ್ಟಿನಿಂದಾಗಿ ಗುತ್ತಿಗೆದಾರರ ಬಿಲ್ ಬಾಕಿ ಉಳಿದಿವೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೀದರ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರ ಯಡವಟ್ಟಿನಿಂದಾಗಿ ರಾಜ್ಯಾದ್ಯಂತ ಗುತ್ತಿಗೆದಾರರಿಗೆ ಹಣ ಮಂಜೂರಾಗಿಲ್ಲ. ಎಲ್ಲ ಜಿಲ್ಲೆಗಳಲ್ಲಿ ಈ ಸಮಸ್ಯೆ ಇದೆ. ಕೆಲಸ ಮಾಡಿದರೂ ಬಿಲ್ ಬಾಕಿ ಇರುವುದು ನಿಜ. ಆದರೆ, ಇದಕ್ಕೆ ಯಾರೂ ಕಾರಣಗಳನ್ನು ಹುಡುಕುತ್ತಿಲ್ಲ.
ಬಿಜೆಪಿಯವರು ಕೊನೆಯ ಎರಡು ವರ್ಷದ ಅವಧಿಯಲ್ಲಿ ಬಜೆಟ್ ಸಪೋರ್ಟ್ ಇಲ್ಲದೇ ಮಾಡಿದ್ದಾರೆ. ಹಣಕಾಸು ಇಲಾಖೆಯವರ ಅನುಮತಿ ಪಡೆಯದೇ ಕೆಲಸಗಳನ್ನು ನೀಡಿದ್ದಾರೆ. ಹೀಗಾಗಿ ಈ ಸಮಸ್ಯೆಗಳು ಆಗಿವೆ. ಹೀಗಾಗಿ ಗ್ಯಾರಂಟಿ ಯೋಜನೆಗಳಿಂದ ಬಿಲ್‌ಗಳಿಗೆ ಏನು ಸಮಸ್ಯೆ ಆಗುತ್ತಿಲ್ಲ. ನನ್ನ ಇಲಾಖೆಯಲ್ಲಿ 10 ಸಾವಿರ ಕೋಟಿ ರೂ. ಬಾಕಿ ಇದೆ ಎಂದು ಆರೋಪಿಸಿದ್ದಾರೆ.
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ 60% ಕಮಿಷನ್ ವಿಚಾರವಾಗಿ ಮಾತನಾಡಿದ ಅವರು, ಗಾಳಿಯಲ್ಲಿ ಗುಂಡು ಹೊಡೆದ್ರೆ ಹೆಂಗೆ ಎಂದು ಪ್ರಶ್ನಿಸಿದ್ದಾರೆ. ಕುಮಾರಸ್ವಾಮಿ ಅಷ್ಟೇ ಅಲ್ಲ, ಬಹಳಷ್ಟು ಜನ ಆರೋಪ ಮಾಡುತ್ತಿದ್ದಾರೆ. ನಾ ಹತ್ತು ಹೇಳೋದು, ಅವರು ಹತ್ತು ಹೇಳೋದು ಬೇಡ ಎಂದಿದ್ದಾರೆ.