ವಂಚಕಿ ಐಶ್ವರ್ಯಾಗೌಡ ವಿರುದ್ಧ ಈಗಾಗಲೇ ಹಲವು ವಂಚನೆಯ ದೂರುಗಳು ದಾಖಲಾಗಿವೆ. ಮಂಗಳವಾರ ಕೂಡ ವೈದ್ಯೆಯೊಬ್ಬರು ಕೋಟ್ಯಾಂತರ ರೂ. ವಂಚಿಸಿರುವ ಕುರಿತು ದೂರು ನೀಡಿದ್ದಾರೆ. ಈ ಮಧ್ಯೆ ವಂಚಕಿಯ ಮತ್ತೊಂದು ಕರಾಳ ಮುಖ ಬಯಲಿಗೆ ಬಂದಿದೆ.
ಐಶ್ವರ್ಯಾ ಗೌಡ ಹಲವಾರು ಗಣ್ಯ ವ್ಯಕ್ತಿಗಳು, ರಾಜಕೀಯ ನಾಯಕರು, ಶಾಸಕರು ಹಾಗೂ ಸ್ವಾಮೀಜಿಗಳೊಂದಿಗೆ ವಿಡಿಯೋ ಕಾಲ್ ನಲ್ಲಿ ಸಂಪರ್ಕದಲ್ಲಿದ್ದರು ಎಂದು ತಿಳಿದು ಬಂದಿದೆ.
ಈಗ ಐಶ್ವರ್ಯಾಗೌಡಳ ಈ ಆಟದ ಸುದ್ದಿ ಕೇಳಿ ಪೊಲೀಸರು ಶಾಕ್ ಆಗಿದ್ದಾರೆ. ಐಶ್ವರ್ಯಾಗೌಡ ರಾಮನಗರ ಜಿಲ್ಲೆಯ ಓರ್ವ ಶಾಸಕ, ಮಂಡ್ಯ ಜಿಲ್ಲೆಯ ಓರ್ವ ಶಾಸಕ, ಪ್ರತಿಷ್ಠಿತ ಮಠದ ಓರ್ವ ಸ್ವಾಮೀಜಿ, ಧಾರವಾಡ ಜಿಲ್ಲೆಯ ಓರ್ವ ಶಾಸಕ ಸೇರಿದಂತೆ ಕೆಲವು ಎಸಿಪಿ ದರ್ಜೆಯ ಅಧಿಕಾರಿಗಳೊಂದಿಗೆ ವಿಡಿಯೋ ಕಾಲ್ ಸಂಪರ್ಕದಲ್ಲಿದ್ದಳು ಎಂದು ತಿಳಿದು ಬಂದಿದೆ.
ಪೊಲೀಸರಿಗೆ ತನಿಖೆಯ ಸಂದರ್ಭದಲ್ಲಿ ವಿಡಿಯೋ ಕಾಲ್ ನ ಕೆಲವು ಸ್ಕ್ರೀನ್ ಶಾಟ್ ಗಳು ಪತ್ತೆಯಾಗಿವೆ. ಆಗ ಐಶ್ವರ್ಯಾಗೌಡ ಆಟ ಕಂಡು ಪೊಲೀಸರು ಕೂಡ ದಂಗಾಗಿದ್ದಾರೆ. ಈ ಕುರಿತು ಪೊಲೀಸರು ತನಿಖೆ ಕೂಡ ನಡೆಸಿದ್ದಾರೆ ಎನ್ನಲಾಗಿದ್ದು, ಅವಳ ಜೊತೆ ಸಂಪರ್ಕದಲ್ಲಿದ್ದವರಿಗೆ ತನಿಖೆಯ ಆತಂಕ ಎದುರಾಗುತ್ತಿದೆ.