ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಬ್ಬರು ಮಕ್ಕಳಲ್ಲಿ HMPV ಸೋಂಕು ಕಾಣಿಸಿಕೊಂಡ ಬೆನ್ನಲ್ಲೇ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ.
ಹೀಗಾಗಿ ಆರೋಗ್ಯ ಇಲಾಖೆ ರಾಜ್ಯದ ILI ಹಾಗೂ ಸಾರಿ ಕೇಸ್ ಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಮಕ್ಕಳಲ್ಲಿ ಉಸಿರಾಟದ ಸಮಸ್ಯೆ, ತೀವ್ರ ಜ್ವರ, ಕೆಮ್ಮು ಹಾಗೂ ಸಾರಿ ಗುಣ ಲಕ್ಷಣಗಳು ಕಂಡು ಬಂದರೆ ಕೂಡಲೇ ಟೆಸ್ಟ್ ಮಾಡಿಸಬೇಕೆಂದು ಸೂಚಿಸಲಾಗಿದೆ.
ಅಲ್ಲದೇ, ಆಸ್ಪತ್ರೆಗಳಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಮಕ್ಕಳ ವೈದ್ಯರಿಗೆ ಹಾಗೂ ಆಸ್ಪತ್ರೆಗಳಿಗೆ ಮಕ್ಕಳ ಆರೋಗ್ಯದ ಬಗ್ಗೆ ಹಾಗೂ ನಿಮ್ಯೋನಿಯಾ ಕೇಸ್ ಗಳ ಬಗ್ಗೆ ಗಮನ ವಹಿಸುವಂತೆ ಸೂಚಿಸಲಾಗಿದೆ.
ಮಕ್ಕಳಲ್ಲಿ ಉಸಿರಾಟದ ಸಮಸ್ಯೆ, ನ್ಯೂಮೋನಿಯಾ ಪ್ರಕರಣ ಕಂಡು ಬಂದರೆ ಟೆಸ್ಟಿಂಗ್ ಹಾಗೂ ಇಲಾಖೆಗೆ ರಿಪೋರ್ಟ್ ಮಾಡುವಂತೆ ಸೂಚಿಸಲಾಗಿದೆ. ಆದರೆ, ಆರೋಗ್ಯ ಇಲಾಖೆಯಲ್ಲಿ HMPV ಮ್ಯುಟೇಷನ್ ಪರೀಕ್ಷೆ ಮಾಡುವ ಕಿಟ್ ಗಳ ಕೊರತೆ ಇದೆ. ಇದು ಮ್ಯುಟೇಷನ್ ಅಥವಾ ಸಾಮಾನ್ಯ ವೈರಸ್ ಎಂದು ತಿಳಿಯಲು ಸಾಧ್ಯವಿಲ್ಲದಾಗಿದೆ. ಮ್ಯುಟೇಷನ್ ಆಗಿದಿಯಾ ಎಂದು ತಿಳಿಯಲು PCR ಟೆಸ್ಟ್ ಅವಶ್ಯಕ. ಆದರೆ, ಟೆಸ್ಟಿಂಗ್ ಕಿಟ್ ಗಳೇ ಆಸ್ಪತ್ರೆಯಲ್ಲಿ ಲಭ್ಯವಿಲ್ಲ. ನಗರದ ರಾಜೀವ್ ಗಾಂಧಿ, ನಿಮ್ಹಾನ್ಸ್ , ಕಿಮ್ಸ್ ಹಾಗೂ ಬಿಎಂಸಿಯಲ್ಲಿರುವ ಪ್ರಯೋಗಾಲಯ, ಸಾರ್ವಜನಿಕ ಆಸ್ಪತ್ರೆಗಳಲ್ಲಿ PCR ಟೆಸ್ಟ್ ಕಿಟ್ ಇಲ್ಲ. ಈ ಮಧ್ಯೆಯೂ ಆರೋಗ್ಯ ಇಲಾಖೆ ತಪಾಸಣೆಗೆ ಸೂಚನೆ ನೀಡಿದೆ.