ಜಿಮ್ ಸೋಮನ ವಿರುದ್ದ ಅ*ತ್ಯಾಚಾರ ಆರೋಪ ಕೇಳಿ ಬಂದಿದ್ದು, ಎಫ್ ಐಆರ್ ದಾಖಲಾಗಿದೆ.
ಯುವತಿಯೊಬ್ಬಳನ್ನು ಸಾಲ ಕೊಡುವುದಾಗಿ ಹೋಟೆಲ್ ಗೆ ಕರೆಯಿಸಿ ಕೃತ್ಯ ಎಸಗಿದ್ದಾನೆಂಬ ಆರೋಪ ಕೇಳಿ ಬಂದಿದೆ.
ಲ್ಯಾಂಗ್ ಪೋರ್ಡ್ ರಸ್ತೆಯ ಹೊಟೇಲ್ ನಲ್ಲಿ ಈ ಪೈಶಾಚಿಕ ಕೃತ್ಯ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಅಶೋಕನಗರ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಜಿಮ್ ಸೋಮ್ ಈ ಹಿಂದೆ ಸಕಲೇಶಪುರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ. ಅಲ್ಲದೇ, ಜಿಮ್ ಸೋಮನ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಈ ಕುರಿತು ಅಶೋಕನಗರ ಪೊಲೀಸರು ತನಿಖೆ ನಡೆಸಿದ್ದಾರೆ.