ಚಿಕ್ಕಮಗಳೂರು: ಅಳಿಯನೊಬ್ಬ ತನ್ನ ಸೋದರ ಮಾವನ ಮೇಲೆ ಮಚ್ಚು ಬೀಸಿರುವ ಘಟನೆ ನಡೆದಿದೆ.
ಜಿಲ್ಲೆಯ ಕಡೂರು (Kaduru) ಪಟ್ಟಣದ ವಿಜಯಲಕ್ಷ್ಮಿ ಟಾಕೀಸ್ ಹತ್ತಿರ ಈ ಘಟನೆ ನಡೆದಿದೆ. ಪಟ್ಟಣದಲ್ಲಿ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ ಭರತ್ ಎಂಬಾತ ಮಚ್ಚು ಬೀಸಿದ ಆರೋಪಿ. ಭರತ್ ನ ತಾಯಿ, ತನ್ನ ಗಂಡನೊಂದಿಗೆ ಜಗಳವಾಡಿ ತವರು ಮನೆಗೆ ಹೋಗಿದ್ದರು.
ಹೀಗಾಗಿ ಮಗ ಭರತ್, ತಾಯಿಯ ಹತ್ತಿರ ಹೋಗಿ ಮರಳಿ ಮನೆಗೆ ಬರುವಂತೆ ಕೇಳಿಕೊಂಡಿದ್ದಾನೆ. ಅಲ್ಲದೇ, ತಾಯಿಯನ್ನು (Mother) ಮನೆಗೆ ಕಳುಹಿಸುವಂತೆ ಮಾವ ಮಹಾಲಿಂಗ ಅವರಿಗೂ ಹೇಳಿದ್ದಾನೆ. ಆದರೂ ತಾಯಿ ಮನೆಗೆ ಹೋಗಿರಲಿಲ್ಲ. ಹೀಗಾಗಿ ಸೋದರ ಮಾವನ ಮೇಲೆ ಕೋಪಗೊಂಡು ಮಚ್ಚು ಬೀಸಿದ್ದಾನೆ ಎನ್ನಲಾಗಿದೆ. ತಾಯಿಯನ್ನು ನೀನು ಹಾಗೂ ನಿಮ್ಮ ಅಪ್ಪ ಮಾನಸಿಕವಾಗಿ ಹಿಂಹಿಸುತ್ತೀರಿ. ನಿಮ್ಮಬ್ಬರನ್ನೂ ಜೈಲಿಗೆ ಅಟ್ಟುತ್ತೇನೆ ಎಂದು ಸೋದರ ಮಾವ ಮಹಾಲಿಂಗ ಹೆದರಿಸಿದ್ದಾರೆ. ಅಲ್ಲದೇ, ದೂರು ಕೂಡ ನೀಡಿದ್ದರು ಎನ್ನಲಾಗಿದೆ.
ಇದರಿಂದ ಕೋಪಗೊಂಡ ಆರೋಪಿ ವಿಜಯಲಕ್ಷ್ಮಿ ಟಾಕೀಸ್ ಹತ್ತಿರ ಟೀ ಕುಡಿಯುತ್ತಿದ್ದ ಮಾವನ ಮೇಲೆ ಲಾಂಗ್ ಬೀಸಿದ್ದಾನೆ. ಘಟನೆಯಲ್ಲಿ ಮಾವನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಆರೋಪಿ ಬಂಧಿಸಿದ್ದಾರೆ.