ಬೆಂಗಳೂರು: ರಾಜ್ಯ ಸರ್ಕಾರ ಬಸ್ ಟಿಕೆಟ್ ದರವನ್ನು ಶೇ. 15ರಷ್ಟು ಹೆಚ್ಚಿಸಿ ಆದೇಶ ಹೊರಡಿಸಿದೆ. ಹೀಗಾಗಿ ಪುರುಷ ಪ್ರಯಾಣಿಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹಾಗಾದರೆ ಯಾವ ಮಾರ್ಗದ ಬಸ್ ದರ ಎಷ್ಟು ಹೆಚ್ಚಳವಾಗಿದೆ ಎಂಬುವುದನ್ನು ನೋಡೋಣ…
ರಾಜ್ಯದಲ್ಲಿ ಕೆಎಸ್ ಆರ್ ಟಿಸಿ, ಬಿಎಂಟಿಸಿ ಸೇರಿದಂತೆ ಎಲ್ಲಾ ರೀತಿಯ ಸರ್ಕಾರಿ ಬಸ್ ಗಳ ದರ ಶೇ. 15 ರಷ್ಟು ಹೆಚ್ಚಳವಾಗಿದೆ. ಸರ್ಕಾರದ ಆದೇಶದಂತೆ ಜ. 5 ರಿಂದ ಪರಿಷ್ಕೃತದ ದರ ಜಾರಿಯಾಗಲಿದೆ ಎನ್ನಲಾಗುತ್ತಿದೆ.
ಕೆಂಪೇಗೌಡ ಬಸ್ ನಿಲ್ದಾಣ ಮೆಜೆಸ್ಟಿಕ್ – ಜಯನಗರದ ಹಿಂದಿನ ದರ 20 ರೂ. ಇತ್ತು. ಹೆಚ್ಚಳದ ನಂತರ 23 ರೂ. ಮೆಜೆಸ್ಟಿಕ್-ಸರ್ಜಾಪುರ ಪ್ರಸ್ತುತ ದರ 25 ರೂ. ಹೆಚ್ಚಳವಾದ ದರ 28 ರೂ. ಮೆಜೆಸ್ಟಿಕ್-ಅತ್ತಿಬೆಲೆ ಸದ್ಯದ ದರ 25 ರೂ. ಹೆಚ್ಚಳದ ನಂತರ 28 ರೂ., ಮೆಜೆಸ್ಟಿಕ್-ಹಾರೊಹಳ್ಳಿ ಪ್ರಸ್ತುತ ದರ 25, ಪರಿಷ್ಕರಣದ ಬಳಿಕ 28.75 ರೂಪಾಯಿ ಆಗಲಿದೆ ಎನ್ನಲಾಗಿದೆ.
ಕೆಂಪೇಗೌಡ ಬಸ್ ನಿಲ್ದಾಣ ಮೆಜೆಸ್ಟಿಕ್ – ಜಯನಗರ ಹಿಂದಿನ ದರ 20 ರೂಪಾಯಿ ಹೆಚ್ಚಳದ ನಂತರ 23 ರೂಪಾಯಿ. ಮೆಜೆಸ್ಟಿಕ್-ಸರ್ಜಾಪುರ ಪ್ರಸ್ತುತ ದರ 25 ರೂ., ಹೆಚ್ಚಳವಾದ ಬಳಿಕ 28 ರೂಪಾಯಿ.
ಮೆಜೆಸ್ಟಿಕ್-ಅತ್ತಿಬೆಲೆ ದರ 25 ರೂಪಾಯಿ, ಬೆಲೆ ಹೆಚ್ಚಳದ ನಂತರ 28 ರೂ., ಮೆಜೆಸ್ಟಿಕ್-ಹಾರೊಹಳ್ಳಿ ಸದ್ಯದ ದರ 25, ಹೆಚ್ಚಾದ ದರ 29 ರೂ. ಆಗಲಿದೆ. ಮೆಜೆಸ್ಟಿಕ್-ಬನಶಂಕರಿ ಸದ್ಯದ ದರ 20 ರೂ., ಪರಿಷ್ಕೃತ ದರ 23 ರೂ. ಆಗಲಿದೆ.
ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಸಾರಿಗೆಯ ನಾರ್ಮಲ್ ಬಸ್ ಗಳ ದರ ನೋಡುವುದಾದರೆ….
ಬೆಂಗಳೂರು ಟು ಹುಬ್ಬಳ್ಳಿ ಸದ್ಯದ ದರ 501 ರೂ. ಹೆಚ್ಚಳದ ನಂತರ- 576 ರೂ.
ಬೆಂಗಳೂರು ಟು ಬೆಳಗಾವಿ ಸದ್ಯದ ದರ 631 ರೂ., ನಂತರ- 725 ರೂ.
ಬೆಂಗಳೂರು ಟು ಕಲಬುರಗಿ ಸದ್ಯದ ದರ 706 ರೂ. ನಂತರ 811 ರೂ.
ಬೆಂಗಳೂರು ಟು ಮೈಸೂರು ಸದ್ಯದ ದರ 185 ರೂ. ನಂತರ – 213 ರೂ.
ಬೆಂಗಳೂರು ಟು ಮಡಿಕೇರಿ ಸದ್ಯದ ದರ 358 ರೂ. ಹೆಚ್ಚಳದ ನಂತರ 411 ರೂ.
ಬೆಂಗಳೂರು ಟು ಚಿಕ್ಕಮಗಳೂರು ಸದ್ಯದ ದರ 285 ರೂ. ನಂತರ 328 ರೂ.
ಬೆಂಗಳೂರು ಟು ಹಾಸನ ಸದ್ಯದ ದರ 246 ರೂ. ಹೆಚ್ಚಳದ ನಂತರ 282 ರೂ.
ಬೆಂಗಳೂರು ಟು ಮಂಗಳೂರು ಸದ್ಯದ ದರ 424 ರೂ. ಹೆಚ್ಚಳದ ನಂತರ 477 ರೂ.
ಬೆಂಗಳೂರು ಟು ರಾಯಚೂರು ಸದ್ಯದ ದರ 556 ರೂ. ಹೆಚ್ಚಳದ ನಂತರ 639 ರೂ.
ಬೆಂಗಳೂರು ಟು ಬಳ್ಳಾರಿ ಸದ್ಯದ ದರ 376 ರೂ. ಹೆಚ್ಚಳದ ನಂತರ 432 ರೂ. ಆಗಲಿದೆ ಎನ್ನಲಾಗಿದೆ.