ವಂಚಕಿ ಐಶ್ವರ್ಯಗೌಡಗೆ ಕೇವಲ ರಾಜಕಾರಣಿಗಳು ಮಾತ್ರವಲ್ಲ, ಸಿನಿಮಾ ತಾರೆಯರ ಜೊತೆಗೂ ಪರಿಚಯ ಇತ್ತು ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಚಾಲಾಕಿ ವಂಚಕಿ ಕೇವಲ ಚಿನ್ನಾಭರಣ ಅಂಗಡಿ ಮಾಲೀಕರಿಗೆ ವಂಚಿಸಿಲ್ಲ. ಸಿನಿಮಾ ಮಾಡುತ್ತೇನೆ ಸ್ಪ್ರಿಪ್ಟ್ ರೆಡಿ ಮಾಡಿಕೊಳ್ಳಿ ಎಂದು ಅಂತ ಸಿನಿತಾರೆಯರಿಗೆ ಕೂಡ ಬಿಸ್ಕೆಟ್ ಹಾಕಿ ವಂಚಿಸಿದ್ದಳು ಎನ್ನಲಾಗಿದೆ.
ಕನ್ನಡದ ಸ್ಟಾರ್ ನಟನೊಬ್ಬನ ಸಿನೆಮಾ ನಿರ್ಮಾಣ ಮಾಡುತ್ತೇನೆಂದು ತಿರುಗಾಡುತ್ತಿದ್ದಳು. ಅಲ್ಲದೇ, ಕಿರುತೆರೆಯ ಹಲವು ನಟಿಯರನ್ನು ಹೀರೋಯಿನ್ ಮಾಡುತ್ತೇನೆಂದು ಬಲೆಗೆ ಹಾಕಿಕೊಳ್ಳುತ್ತಿದ್ದಳು ಎಂದು ತಿಳಿದು ಬಂದಿದೆ.
ಈಗ ತನಿಖೆಯಲ್ಲಿ ಸಿನಿ ತಾರೆಯರು, ಸೀರಿಯಲ್ ನಟಿಯರ ಜೊತೆ ಸತತ ಸಂಪರ್ಕದಲ್ಲಿರುವುದು ಕೂಡ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ತನಿಖೆಯ ಭಾಗವಾಗಿ ಕನ್ನಡದ ಸ್ಟಾರ್ ನಟ ಹಾಗೂ ಕಿರುತೆರೆ ನಟಿಯರಿಗೂ ನೋಟಿಸ್ ನೀಡುವ ಸಾಧ್ಯತೆ ಇದೆ. ಕಿರುತೆರೆ ನಟಿಯರು ಹಾಗೂ ಸ್ಟಾರ್ ನಟನಿಗೆ ಐಶ್ವರ್ಯಗೌಡ ದುಬಾರಿ ಬೆಲೆಯ ಗಿಫ್ಟ್ ನೀಡಿರುವ ಶಂಕೆಯನ್ನು ಕೂಡ ಪೊಲೀಸರು ವ್ಯಕ್ತಪಡಿಸಿದ್ದು, ಈ ಕುರಿತು ತನಿಖೆ ನಡೆಸುತ್ತಿದ್ದಾರೆ.