ಬೆಂಗಳೂರು: ಹೊಸ ವರ್ಷದ ಸಂಭ್ರಮದಲ್ಲಿ ಎಣ್ಣೆ ಪಾರ್ಟಿ ಮಾಡಿ ವಾಹನ ಚಲಾಯಿಸಿದವರಿಗೆ ಪೊಲೀಸರು ಚಳಿ ಬಿಡಿಸಿದ್ದಾರೆ.
ಒಂದೇ ರಾತ್ರಿಯಲ್ಲಿ ಬೆಂಗಳೂರಿನಲ್ಲಿ ಬರೋಬ್ಬರಿ 513 ಕೇಸ್ ಬಿದ್ದಿವೆ. ನ್ಯೂ ಇಯರ್ ರಾತ್ರಿ 513 ಡ್ರಂಕ್ & ಡ್ರೈವ್ (Drunk And Drive) ಪ್ರಕರಣಗಳು ದಾಖಲಾಗಿವೆ. ಸಂಚಾರ ಪೊಲೀಸರು ಸುಮಾರು 28,127 ವಾಹನಗಳ ಪರಿಶೀಲನೆ ನಡೆಸಿದ್ದಾರೆ.
ಹೊಸ ವರ್ಷದ ಹಿನ್ನೆಲೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಾತ್ರಿ ಸಂಭ್ರಮ ಮನೆ ಮಾಡಿತ್ತು. ಎಂಜಿ ರಸ್ತೆ, ಚರ್ಚ್ ಸ್ಟ್ರೀಟ್, ವೈಟ್‌ಫೀಲ್ಡ್ ಸೇರಿದಂತೆ ಯುವಜನತೆ ನ್ಯೂ ಇಯರ್ ಸಂಭ್ರಮದಲ್ಲಿ ಭರ್ಜರಿಯಾಗಿ ಭಾಗಿಯಾಗಿದ್ದರು.
ಯುವಕ-ಯುವತಿಯರು ಅನೇಕರು ಎಣ್ಣೆ ಕುಡಿದು ನಶೆಯಲ್ಲಿ ತೇಲಿದ ದೃಶ್ಯಗಳು ಕೂಡ ಕಂಡು ಬಂದವು. ಕೆಲವರು ರಸ್ತೆಯಲ್ಲೇ ಕುಸಿದು ಬಿದ್ದಿರುವ ಘಟನೆಗಳು ಕೂಡ ನಡೆದಿವೆ. ಮಧ್ಯರಾತ್ರಿ ಪಾರ್ಟಿ ಮುಗಿದ ನಂತರ ಹಲವರು ನಶೆಯಲ್ಲೇ ಮನೆಯತ್ತ ಮುಖ ಮಾಡಿದ್ದಾರೆ. ಈ ವೇಳೆ ಪೊಲೀಸರು ದಂಡ ವಿಧಿಸಿದ್ದಾರೆ.