ಬಳ್ಳಾರಿ: ಭರ್ಜರಿಯಾಗಿ ಹೊಸ ವರ್ಷ (New Year)ವನ್ನು ಸ್ವಾಗತಿಸಿರುವ ಜನರು, ಪ್ರವಾಸಿ ತಾಣಕ್ಕೆ ಹಾಗೂ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಹೀಗಾಗಿ ದಕ್ಷಿಣ ಕಾಶಿ ಹಂಪಿಗೆ (Hampi) ಪ್ರವಾಸಿಗರ ದಂಡು ಹರಿದು ಬಂದಿದೆ. ಹೊಸ ವರ್ಷದಂದು ಸಂಭ್ರಮಿಸಲು ಹಂಪಿಗೆ ಆಗಮಿಸ್ತಿರುವ ಪ್ರವಾಸಿಗರು ಬೆಳ್ಳಂಬೆಳಗ್ಗೆ ಹಂಪಿಯ ಮಾತಂಗ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ.
ಬೆಟ್ಟದ ತುತ್ತ ತುದಿ ಏರಿರುವ ಪ್ರವಾಸಿಗರು, ವರ್ಷದ ಮೊದಲ ಸೂರ್ಯೋದಯ ಕಣ್ತುಂಬಿಕೊಂಡಿದ್ದಾರೆ. ಈ ವೇಳೆ ಹಂಪಿಯ ಪ್ರಕೃತಿ ಸೌಂದರ್ಯ ಸವಿದಿದ್ದಾರೆ. ಮತ್ತೊಂದೆಡೆ ತಂಡವಾಗಿ ಹಂಪಿಗೆ ಬರುತ್ತಿರುವ ಪ್ರವಾಸಿಗರು, ಸ್ಮಾರಕಗಳ ಮುಂದೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿ ಬೀಳುತ್ತಿದ್ದಾರೆ.