ಬಿಬಿಎಂಪಿಯಿಂದ ಹೊಸ ವರ್ಷಚಾರಣೆ ಗೆ ಲಕ್ಷ .ಲಕ್ಷ ಖರ್ಚು ಮಾಡಿರುವ ಮಾಹಿತಿಯೊಂದು ಹೊರ ಬಿದ್ದಿದೆ.
ಸಾರ್ವಜನಿಕರ ತೆರಿಗೆ ಹಣದಲ್ಲಿ ರಸ್ತೆಯಲ್ಲಿ ಪಾರ್ಟಿ ಮಾಡುವುದಕ್ಕೆ ಬಿಬಿಎಂಪಿ ಲಕ್ಷ ಲಕ್ಷ ಹಣ ಖರ್ಚು ಮಾಡಿದೆ ಎನ್ನಲಾಗುತ್ತಿದೆ. ಪಾಲಿಕೆಯಿಂದ ಎಂಜಿ ರಸ್ತೆ,.ಬ್ರಿಗೇಡ್ ರಸ್ತೆಯಲ್ಲಿ ಲೈಟ್ ಬ್ಯಾರಿಕೇಟ್ ಹಾಕಿ, ಅದಕ್ಕೆ ಲಕ್ಷ ಲಕ್ಷ ಬಿಲ್ ಪಡೆಯಲಾಗಿದೆ. ಹಣ ಇಲ್ಲ ಎನ್ನುತ್ತ, ಹೀಗೆ ಪಾರ್ಟಿಗೆಂದು ಲಕ್ಷ ಲಕ್ಷ ರೂ. ಖರ್ಚು ಮಾಡಿದ್ದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ನ್ಯೂ ಇಯರ್ ಸೆಲೆಬ್ರೇಷನ್ ಗೆ ಪಾಲಿಕೆಯಿಂದ ಎಂಜಿ ರಸ್ತೆ,.ಬ್ರಿಗೇಡ್ ರಸ್ತೆ, ಕೋರಮಂಗಲ, ಇಂದಿರ ನಗರದ ರಸ್ತೆಗಳಿಗೆ ಹೆಚ್ಚುವರಿ ಲೈಟ್ ಹಾಗೂ ಬ್ಯಾರಿಕೇಟ್ ಅಳವಡಿಸಲಾಗಿದೆ. ಇವುಗಳಿಗೆ ಬರೋಬ್ಬರಿ 25 ಲಕ್ಷ ರೂ. ಖರ್ಚು ಮಾಡಲಾಗಿದೆ.
ಪೊಲೀಸ್ ಇಲಾಖೆ ನ್ಯೂ ಇಯರ್ ಗೆ ಎಂಜಿ ರಸ್ತೆ,.ಬ್ರಿಗೇಡ್ ರಸ್ತೆಗಳಲ್ಲಿ ಹೆಚ್ಚುವರಿ ಲೈಟ್ ಹಾಕಿ ಎಂದು ಮನವಿ ಮಾಡಿದ್ದಕ್ಕೆ ಇಷ್ಟೊಂದು ಖರ್ಚು ಮಾಡಲಾಗಿದೆ. ಕೇವಲ ಒಂದೇ ದಿನಕ್ಕೆ ಲೈಟ್ ಗಳನ್ನು ಅಳವಡಿಸಿ ಇಷ್ಟೊಂದು ಖರ್ಚು ಮಾಡಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.