ಸೂಪರ್ ಸ್ಟಾರ್ ಉಪೇಂದ್ರ ಅಭಿನಯದ ‘ಯುಐ’ ಸಿನಿಮಾ ಹಾಗೂ ಸುದೀಪ್ ಅಭಿನಯದ ‘ಮ್ಯಾಕ್ಸ್’ ಚಿತ್ರ ವರ್ಷದ ಅಂತ್ಯಕ್ಕೆ ಬಿಡುಗಡೆಯಾಗಿ, ಅಭಿಮಾನಿಗಳಿಗೆ ರಸದೌತಣ ಉಣ ಬಡಿಸುತ್ತಿವೆ. ಈ ಎರಡೂ ಚಿತ್ರಗಳು ಐದೇ ದಿನಗಳ ಅಂತರದಲ್ಲಿ ಬಿಡುಗಡೆಯಾಗಿವೆ. ಸದ್ಯ ಈ ಪೈಕಿ ಮ್ಯಾಕ್ಸ್ ಭರ್ಜರಿ ಪ್ರದರ್ಶನ ಕಾಣುತ್ತಿದೆ.
‘ಯುಐ’ ಸಿನಿಮಾ ಡಿಸೆಂಬರ್ 20ರಂದು ತೆರೆಗೆ ಬಂದರೆ, ‘ಮ್ಯಾಕ್ಸ್’ ಸಿನಿಮಾ ಡಿಸೆಂಬರ್ 25ರಂದು ಬಿಡುಗೆಡಯಾಗಿದೆ. ಎರಡೂ ಸಿನಿಮಾಗಳ ಬಗ್ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ‘ಮ್ಯಾಕ್ಸ್’ ಚಿತ್ರ ಭರ್ಜರಿಯಾಗಿ ಮುನ್ನುಗ್ಗುತ್ತಿದೆ.
‘ಯುಐ’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಮೊದಲ ವಾರ ಒಳ್ಳೆಯ ಪ್ರದರ್ಶನ ಕಂಡಿತ್ತು. ಸಿನಿಮಾ ಭಿನ್ನವಾಗಿ ಮೂಡಿ ಬಂದಿದ್ದು, ಉಪೇಂದ್ರ ಹಲವು ವಿಚಾರಗಳನ್ನು ಹೇಳಿದ್ದಾರೆ. ಈ ಎಲ್ಲಾ ಕಾರಣದಿಂದ ಚಿತ್ರ ಉತ್ತಮ ಕಲೆಕ್ಷನ್ ಮಾಡಿದೆ. ಈ ಚಿತ್ರ 10 ದಿನಕ್ಕೆ ಸುಮಾರು 29.45 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. 11ನೇ ದಿನದ ಗಳಿಕೆ ಕೊಂಚ ತಗ್ಗಿದ್ದು, 30 ಕೋಟಿ ರೂಪಾಯಿ ಆಸುಪಾಸಿನಲ್ಲಿ ಚಿತ್ರದ ಗಳಿಕೆ ಆಗಿದೆ ಮಾಡಿದೆ ಎಂದು ತಿಳಿದು ಬಂದಿದೆ.
ಆದರೆ, 5 ದಿನ ತಡವಾಗಿ ಬಿಡುಗಡೆಯಾದರೂ ಮ್ಯಾಕ್ಸ್ ಚಿತ್ರ ಮಾತ್ರ ಗಳಿಕೆಯನ್ನು ಹಿಂದಿಕ್ಕಿದೆ. ‘ಮ್ಯಾಕ್ಸ್’ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಈ ಚಿತ್ರ ಸೋಮವಾರ 2.5 ಕೋಟಿ ರೂ. ಕಲೆಕ್ಷನ್ ಮಾಡಿದೆ. ವಾರದ ದಿನ ಇಷ್ಟು ದೊಡ್ಡ ಮಟ್ಟದ ಕಲೆಕ್ಷನ್ ಆಗಿರುವುದು ಚಿತ್ರಕ್ಕೆ ಸಹಕಾರಿ ಆಗಿದೆ. ಈ ಮೂಲಕ ಚಿತ್ರದ ಒಟ್ಟಾರೆ ಕಲೆಕ್ಷನ್ 30.15 ಕೋಟಿ ರೂ. ಆಗಿದೆ. ಈ ಮೂಲಕ ‘ಯುಐ’ ಕಲೆಕ್ಷನ್ ಹಿಂದಿಕ್ಕಿದೆ.
ಯುಐ’ 30 ಕೋಟಿ ರೂಪಾಯಿ ಕ್ಲಬ್ ಸೇರಲು ತೆಗೆದುಕೊಂಡಿದ್ದು ಬರೋಬ್ಬರಿ 11 ದಿನ. ಆದರೆ, ಸುದೀಪ್ ಸಿನಿಮಾ ಕೇವಲ 6 ದಿನಕ್ಕೆ ಈ ಕ್ಲಬ್ ಸೇರಿದೆ.