ತಮ್ಮ ಹೆಸರು ಹೇಳಿಕೊಂಡು ವಂಚನೆ; ಡಿ.ಕೆ. ಸುರೇಶ್ ದೂರು
ಬೆಂಗಳೂರು: ತಮ್ಮ ಹೆಸರು ಹೇಳಿಕೊಂಡು ಚಿನ್ನದ ವ್ಯಾಪಾರಿಗೆ ಕೋಟ್ಯಾಂತರ ವಂಚನೆ ಮಾಡಿರುವ ಐಶ್ವರ್ಯಗೌಡ ವಿರುದ್ಧ ಮಾಜಿ ಸಂಸದ ಡಿ.ಕೆ. ಸುರೇಶ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರಿಗೆ ದೂರು ನೀಡಿದ್ದಾರೆ.
ಡಿ.ಕೆ. ಸುರೇಶ್ ನನ್ನ ಸಹೋದರ ಎಂದು ಹೇಳಿಕೊಂಡು ಚಿಕ್ಕದ ಅಂಗಡಿ ಮಾಲೀಕರ ಬಳಿಕ ಐಶ್ವರ್ಯ ಗೌಡ ಕೋಟಿ ಕೋಟಿ ವಂಚಿಸಿದ್ದಾರೆ. ವನಿತಾ ಐತಾಳ ನೀಡಿರುವ ದೂರಿನ ಮೇರೆಗೆ ಈಗಾಗಲೇ ಐಶ್ವರ್ಯ ಗೌಡ ಅವರನ್ನು ಪೊಲೀಸರು ಬಂಧಿಸಿದ್ದಾರೆ. ನನ್ನ ಹೆಸರು ಬಳಕೆ ಮಾಡಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದನ್ನು ನಾನು ಗಮನಿಸಿದ್ದೇನೆ. ಯಾರೇ ನನ್ನ ಹೆಸರು ದುರ್ಬಳಕೆ ಮಾಡಿಕೊಂಡಿದ್ದರೂ ಈ ಬಗ್ಗೆ ತನಿಖೆ ಮಾಡಲಿ ಎಂದು ಹೇಳಿದ್ದಾರೆ. ಪ್ರಕರಣದ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ವಂಚನೆ ಮಾಡಿರುವವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಇಂತಹ ಅನ್ಯಾಯಗಳು ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.