ಹುಬ್ಬಳ್ಳಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಪರಿಷತ್ ಸದಸ್ಯ ಸಿಟಿ ರವಿ ಬಳಸಿದ್ದಾರೆನ್ನಲಾಗಿರುವ ಅವಾಚ್ಯ ಪದದ ಪ್ರಕರಣವನ್ನು ಇಷ್ಟಕ್ಕೆ ಮುಗಿಸಿ ಸಾಗಬೇಕು ಎಂದು ಬಯಸಿದ್ದೆ. ಆದರೆ, ಎಲ್ಲರೂ ತಮ್ಮ ತಮ್ಮ ಇಚ್ಛೆಗೆ ಬದ್ಧರಾಗಿದ್ದಾರೆ. ಹೀಗಾಗಿ ನಾನು ಈ ವಿಷಯದಲ್ಲಿ ಮೌನವಾಗಿರುತ್ತೇನೆಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣವನ್ನು ಇಷ್ಟಕ್ಕೆ ಮುಗಿಸಿ ಮುಂದೆ ಸಾಗಬೇಕು ಎಂದು ನಾನು ಬಯಸಿದ್ದೆ. ಈ ವಿಷಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಗೂ ಚರ್ಚಿಸಿದ್ದೆ. ಆದರೆ, ಎಲ್ಲರೂ ತಮ್ಮ ತಮ್ಮ ನಿಲುವುಗಳಿಗೆ ಬದ್ಧರಾಗಿದ್ದಾರೆ. ಈ ವಿಷಯ ರಾಜಕೀಯವಾಗಿ ಮಾರ್ಪಟ್ಟಿರುವುದರಿಂದ ಆತ್ಮಸಾಕ್ಷಿಗೆ ವಿರುದ್ಧವಾಗಿ ಯಾರ ಪರ ಹಾಗೂ ವಿರೋಧ ನಾನು ನಿಲ್ಲಲಾರೆ. ಆ ಪೀಠದ ಮೇಲೆ ಕುಳಿತಾಗ ನನಗೆ ಎಲ್ಲ ಪಕ್ಷದ ಸದಸ್ಯರು ಒಂದೇ ಎಂದು ಹೇಳಿದ್ದಾರೆ.