ಹೊಸ ವರ್ಷದ ಸಂಭ್ರಮದ ಸನಿಹದಲ್ಲಿ ಸಿನಿ ರಸಿಕರಿಗೆ ಹಬ್ಬದ ರಸದೌತಣ ಸಿಕ್ಕಷ್ಟೇ ಖುಷಿಯಾಗಿದೆ. ಏಕೆಂದರೆ, ಕ್ರಿಸ್ ಮಸ್ ಹಬ್ಬದ ಸಂದರ್ಭದಲ್ಲಿ ಸಾಲು ಸಾಲು ಚಿತ್ರಗಳು ಬಿಡುಗಡೆಯಾಗಿದ್ದವು. ಕನ್ನಡ ಮಾತ್ರವಲ್ಲದೆ ಹಿಂದಿ ಹಾಗೂ ತಮಿಳಿನಲ್ಲಿ ಸಿನಿಮಾಗಳು ಬಿಡುಗಡೆಯಾಗಿದ್ದವು. ಅಲ್ಲದೇ, ಕನ್ನಡದ ಎರಡು ದೊಡ್ಡ ಸ್ಟಾರ್ ಗಳ ಚಿತ್ರ ಕೂಡ ಬಿಡುಗಡೆಯಾಗಿದ್ದವು.
ಯುಐ’ ಹಾಗೂ ‘ಮ್ಯಾಕ್ಸ್’ ಸಿನಿಮಾ ಬಿಡುಗಡೆಯಾಗಿದ್ದವು. ಎರಡೂ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿವೆ. ಇವುಗಳ ಅಬ್ಬರದ ಮಧ್ಯೆ ಹಿಂದಿಯ ‘ಬೇಬಿ ಜಾನ್’ ಸಿನಿಮಾ ಮಂಕಾಗಿದೆ. ಇವುಗಳ ಮಧ್ಯೆ ‘ಮ್ಯಾಕ್ಸ್’ ಚಿತ್ರ ಭರ್ಜರಿಯಾಗಿ ಮುನ್ನುಗ್ಗುತ್ತಿದೆ.
ಡಿ. 20ರಂದು ‘ಯುಐ’ ಸಿನಿಮಾ ಬಿಡುಗಡೆಯಾಗಿತ್ತು. ಮೊದಲ ವಾರ ಈ ಚಿತ್ರ ಉತ್ತಮ ಕಲೆಕ್ಷನ್ ಮಾಡಿತ್ತು. ಸಿನಿಮಾದ ಒಟ್ಟಾರೆ ಗಳಿಕೆ ಮೊದಲ ವಾರ ಚೆನ್ನಾಗಿಯೇ ಇತ್ತು. ಆದರೆ, ‘ಮ್ಯಾಕ್ಸ್’ ರಿಲೀಸ್ ಆದ ನಂತರ ಚಿತ್ರಕ್ಕೆ ಕೊಂಚ ಹಿನ್ನಡೆಯಾಗುತ್ತಿದೆ.
ಉಪೇಂದ್ರ ನಟನೆಯ ಯುಐ ಚಿತ್ರ ಬಾಕ್ಸ್ ಆಫೀಸ್ ನಲ್ಲಿ 10ನೇ ದಿನ ಭಾನುವಾರ ಕೇವಲ 1.15 ಕೋಟಿ ರೂ. ಗಳಿಸಿದೆ. ಈ ಮೂಲಕ ಚಿತ್ರದ ಒಟ್ಟಾರೆ ಕಲೆಕ್ಷನ್ 29.45 ಕೋಟಿ ರೂ. ಆಗಿದೆ. ‘ಮ್ಯಾಕ್ಸ್’ ಸಿನಿಮಾ ಭಾನುವಾರ ಭರ್ಜರಿ ಗಳಿಕೆ ಮಾಡಿದೆ. ಈ ಚಿತ್ರ ಕೇವಲ ಐದು ದಿನಕ್ಕೆ ಸುಮಾರು 28 ಕೋಟಿ ರೂ. ಗಳಿಕೆ ಮಾಡಿದೆ.
ಹಿಂದಿಯ ‘ಬೇಬಿ ಜಾನ್’ ಚಿತ್ರದ ಗಳಿಕೆ 28.45 ಕೋಟಿ ರೂ. ಆಗಿದೆ. ಈಗ ಮ್ಯಾಕ್ಸ್ ಚಿತ್ರದ ಮುಂದೆ ಯಾವ ಚಿತ್ರವೂ ಇಲ್ಲ ಎನ್ನುವಂತಹ ವಾತಾವರಣ ನಿರ್ಮಾಣವಾಗಿದೆ.