ಬೆಂಗಳೂರು: ಶ್ವೇತಾಗೌಡ ಎಂಬ ಮಹಿಳೆ ತಮ್ಮ ಹೆಸರು ಬಳಸಿಕೊಂಡು ಚಿನ್ನದ ಅಂಗಡಿ ಮಾಲೀಕರಿಗೆ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಕೆ. ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಮಾಧ್ಯಮಗಳಲ್ಲಿ ವಂಚನೆಯ ಪ್ರಕರಣವನ್ನು ಗಮನಿಸಿದ್ದೇನೆ. ನನಗೆ ಒಬ್ಬಳೇ ತಂಗಿ ಇರುವುದು. ಒಂದೆರಡು ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನ ಮಾಡಿದ್ದರು. ಕಾಮನ್ ಆಗಿ ಎಲ್ಲ ಕಾರ್ಯಕ್ರಮಗಳಿಗೆ ಹೋಗುವಂತೆ ಹೋಗಿದ್ದೇನೆ ಅಷ್ಟೇ. ಬೇರೆ ಯಾವ ಸಂಬಂಧವೂ ಇಲ್ಲ ಎಂದಿದ್ದಾರೆ.
ಹೀಗಾಗಿ ಈ ಕುರಿತು ಪೊಲೀಸರೊಂದಿಗೆ ಮಾತನಾಡಿ ಮಾಹಿತಿ ಪಡೆಯುತ್ತೇನೆ. ಎರಡು-ಮೂರು ದಿನದಲ್ಲಿ ಪೊಲೀಸ್ ಕಮಿಷನರ್ಗೂ ಕೂಡ ದೂರು ನೀಡುತ್ತೇನೆ. ಯಾರೇ ಈ ರೀತಿ ಮಾಡಿದ್ದರೂ ಆ ಬಗ್ಗೆ ಸಮಗ್ರ ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಿ, ಯಾರಿಗೆ ಅನ್ಯಾಯ ಆಗಿದೆಯೋ ಅವರಿಗೆ ನ್ಯಾಯ ಕೊಡಿಸುವಂತೆ ಕೋರುತ್ತೇನೆ ಎಂದಿದ್ದಾರೆ.