ಹೈದರಾಬಾದ್ ನಲ್ಲಿನ ಸಂಧ್ಯಾ ಥಿಯೇಟರ್ ನಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಮಹಿಳೆ ಸಾವನ್ನಪ್ಪಿ, ಬಾಲಕ ಗಾಯಗೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ಕೋರ್ಟ್ ವಿಚಾರಣೆಗೆ ಹಾಜರಾಗಿದ್ದಾರೆ.
ಈಗಾಗಲೇ ನಟ ಅಲ್ಲು ಅರ್ಜುನ್ ಗೆ ಒಂದು ತಿಂಗಳ ಮಧ್ಯಂತರ ಜಾಮೀನು ಪಡೆದಿದ್ದು, ಪೂರ್ಣ ಪ್ರಮಾಣದ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇತ್ತೀಚೆಗೆ ಅಲ್ಲು ಅರ್ಜುನ್ ಅವರು ಆನ್ಲೈನ್ ಮೂಲಕ ಸ್ಥಳೀಯ ಕೋರ್ಟ್ ವಿಚಾರಣೆಗೆ ಹಾಜರಾಗಿದ್ದಾರೆ. ಅರ್ಜಿ ವಿಚಾರಣೆ ಮುಂದೂಡಲಾಗಿದೆ.
ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ 11ನೇ ಆರೋಪಿ ಆಗಿದ್ದಾರೆ. ಅವರು ಜಾಮೀನಿಗಾಗಿ ಮನವಿ ಮಾಡಿದ್ದು, ವಿಚಾರಣೆ ನಡೆದಿದೆ. ಪೊಲೀಸರು ಹೆಚ್ಚುವರಿ ಸಮಯಾವಕಾಶ ಕೇಳಿದ್ದು, ಅರ್ಜಿ ವಿಚಾರಣೆ ಡಿ. 30ಕ್ಕೆ ಮಂದೂಡಲ್ಪಟ್ಟಿದೆ. ಕೋರ್ಟ್ ಗೆ ಹಾಜರಾದರೆ ಅಭಿಮಾನಿಗಳು ಮುತ್ತಿಕ್ಕೊಳ್ಳುವ ಸಾಧ್ಯತೆ ಇರುವುದರಿಂದಾಗಿ ಅಲ್ಲು ಅರ್ಜುನ್ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರು