ವಾಷಿಂಗ್ಟನ್: ಚಂದನವನದ (Sandalwood) ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಗೆ (Shiva Rajkumar) ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಅಮೆರಿಕದಲ್ಲಿನ ಫ್ಲೋರಿಡಾದ ಮಿಯಾಮಿ ಕ್ಯಾನ್ಸರ್ ಇನ್ಸಿಟ್ಯೂಟ್ ನಲ್ಲಿ (Miami Cancer Institute) ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸುಮಾರು 6 ಗಂಟೆಗಳ ಕಾಲ ತಜ್ಞ ವೈದ್ಯರು ಶಿವಣ್ಣನಿಗೆ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ ಎನ್ನಲಾಗಿದೆ.
ಭಾರತೀಯ ಮೂಲದ ತಜ್ಞ ವೈದ್ಯ ಡಾ. ಮುರುಗೇಶ್ ನೇತೃತ್ವದಲ್ಲಿ ಮಿಯಾಮಿ ಆಸ್ಪತ್ರೆಯಲ್ಲಿ ಶಿವಣ್ಣಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಭಾರತೀಯ ಕಾಲಮಾನ ರಾತ್ರಿ 11:30ರ ಸುಮಾರಿಗೆ ಶಸ್ತ್ರಚಿಕಿತ್ಸೆ ಮುಗಿದಿದೆ. ಅಮೆರಿಕದ ಕಾಲಮಾನ ಬೆಳಗ್ಗೆ 8ಕ್ಕೆ ಭಾರತೀಯ ಕಾಲಮಾನದ ಪ್ರಕಾರ 6 ಗಂಟೆಗೆ ಆಪರೇಷನ್ ಥಿಯೇಟರ್ ಗೆ ಶಿವಣ್ಣರನ್ನು ಕರೆದುಕೊಂಡು ಹೋಗಲಾಗಿತ್ತು. ಸುಮಾರು 6 ಗಂಟೆಗಳ ಕಾಲ ಸರ್ಜರಿ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಶಿವಣ್ಣನೊಂದಿಗೆ ಪತ್ನಿ ಗೀತಾ, ಪುತ್ರಿ ನಿವೇದಿತಾ, ಬಾಮೈದ ಮಧು ಬಂಗಾರಪ್ಪ ಇದ್ದರು ಎನ್ನಲಾಗಿದೆ.
ಕ್ಯಾನ್ಸರ್ ಚಿಕಿತ್ಸೆಗೊಳಾಗಿರುವ ಶಿವಣ್ಣನಿಗೆ ಆಸ್ಪತ್ರೆಯಲ್ಲೇ ಇನ್ನೊಂದು ವಾರ ಚಿಕಿತ್ಸೆ ಮುಂದುವರೆಯಲಿದೆ. ನುರಿತ ವೈದ್ಯರ ನಿಗಾದಲ್ಲಿ ಶಿವಣ್ಣ ಇರಲಿದ್ದಾರೆ. ಆನಂತರ ಮನೆಗೆ ಮರಳಿದ್ದಾರೆ. ಜ. 26ರಂದು ಮರಳಇ ಭಾರತಕ್ಕೆ ಬರಲಿದ್ದಾರೆ.