ವರ್ತೂರ್ ಪ್ರಕಾಶ್ ಆಪ್ತೆ ಶ್ವೇತಾ ಗೌಡ ಹಾಗೂ ರಾಮದೇವ್ ಜ್ಯುವೆಲರ್ಸ್ ಮಾಲೀಕ ಚಿನ್ನಾರಮ್ ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಮಾಜಿ ಸಚಿವ ವರ್ತೂರ್ ಪ್ರಕಾಶ್ ಆಪ್ತೆ ಸಂಜಯ್ ಬಾಫ್ನಾ ಬಳಿ ಚಿನ್ನ ಖರೀದಿಸಿ ಚಿನ್ನಾರಾಮ್ ನೀಡಿದ್ದಳು. ಸದ್ಯ ವಿಚಾರಣೆ ಸಂದರ್ಭದಲ್ಲಿ ಚಿನ್ನಾರಾಮ್ ಗೆ ಚಿನ್ನಾಭರಣ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಚಿನ್ನಾರಾಮ್ ನು ಶ್ವೇತಾಳನ್ನು ಮುಂದೆ ಬಿಟ್ಟು ಚಿನ್ನಾಭರಣ ಪಡೆದು ವಂಚಿಸುತ್ತಿದ್ದ ಎನ್ನಲಾಗಿದೆ. ಅಲ್ಲದೇ, ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಪುಲಕೇಶಿ ನಗರ ಎಸಿಪಿ ಗೀತಾ ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ. ಈಗಾಗಲೇ ವರ್ತೂರ್ ಪ್ರಕಾಶ್ ಅವರು ಪೊಲೀಸರಿಗೆ 12.60 ಲಕ್ಷ ರೂ. ಹಣ, 100 ಗ್ರಾಂ ಚಿನ್ನ ಸೇರಿದಂತೆ ಉಂಗುರ, 2 ಬ್ರೇಸ್ಲೈಟ್ ಮರಳಿ ಪೊಲೀಸರಿಗೆ ನೀಡಿದ್ದಾರೆ.
ವರ್ತೂರ್ ಪ್ರಕಾಶ್, ಶ್ವೇತಾ ಜೊತೆ ಎಂಗೇಜ್ ಮೆಂಟ್ ಮಾಡಿಕೊಳ್ಳಲು ಸಿದ್ಧತೆ ನಡೆಸಿದ್ದರು ಎಂದು ಕೂಡ ತಿಳಿದು ಬಂದಿದೆ. ಅದೇ ಉಂಗುರದ ಫೋಟೊವನ್ನು ಶ್ವೇತಾಗೆ ವರ್ತೂರ್ ಕಳುಹಿಸಿದ್ದರು ಎನ್ನಲಾಗಿದೆ. ತಿರುಪತಿಯಲ್ಲಿ ಎಂಗೇಜ್ಮೆಂಟ್ ಮಾಡಿಕೊಳ್ಳಲು ಟಿಕೆಟ್ ಬುಕ್ ಮಾಡಿಕೊಂಡಿದ್ದರು ಎಂಬುವುದು ತನಿಖೆಯಿಂದ ತಿಳಿದು ಬಂದಿದೆ.