ಮಾಜಿ ಸಚಿವ ಸಿ.ಟಿ. ರವಿ ಅವರಿಗೆ ಆಗಿರುವ ಗಾಯದ ಬಗ್ಗೆ ವೈದ್ಯರು ನೀಡಿರುವ ಚಿಕಿತ್ಸೆಯ ಮಾಹಿತಿ ವೈರಲ್ ಆಗಿದೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಅಶ್ಲೀಲ ಪದ ಬಳಕೆ ಮಾಡಿದ್ದಾರೆಂಬ ಆರೋಪ ಕೇಳಿ ಬರುತ್ತಿದ್ದಂತೆ ಸುವರ್ಣಸೌಧದಲ್ಲಿ ದೊಡ್ಡ ವಿವಾದವೇ ನಡೆದಿತ್ತು. ಹೇಳಿಕೆ ಕುರಿತು ಸಚಿವೆ ದೂರು ನೀಡಿದ್ದರು ಹೀಗಾಗಿ ಪೊಲೀಸರು ಸಿ.ಟಿ. ರವಿಯನ್ನು ಬಲವಂತವಾಗಿ ಅರೆಸ್ಟ್ ಮಾಡಿದ್ದರು.
ಈ ವೇಳೆ ನಡೆದ ಗೊಂದಲದಲ್ಲಿ ರವಿ ತಲೆಗೆ ಗಾಯವಾಗಿ ಸಣ್ಣ ಪ್ರಮಾಣದಲ್ಲಿ ಗಾಯವಾಗಿತ್ತು. ಆದರೆ, ಅವರ ಹಣೆಗೆ ದೊಡ್ಡ ಪಟ್ಟಿ ನೋಡಿ, ದೊಡ್ಡ ಮಟ್ಟದ ಗಾಯವಾಗಿರಬಹುದು ಎಂದು ಜನ ನಂಬಿದ್ದರು. ಸದ್ಯ ಈ ಕುರಿತು ವೈದ್ಯರ ಬರಹ ವೈರಲ್ ಆಗಿದೆ.
ತಲೆಗೆ ಸಣ್ಣಪುಟ್ಟ ಗಾಯವಾಗಿತ್ತು. ಹೀಗಾಗಿ ಸರಳ ಬ್ಯಾಂಡೇಜ್ ಮಾಡಲಾಯಿತು. ಪ್ರಾಥಮಿಕ ಚಿಕಿತ್ಸೆ ನೀಡುವಷ್ಟು ಮಾತ್ರ ಗಾಯವಾಗಿತ್ತು ಎಂದು ಚಿಕಿತ್ಸೆ ನೀಡಿದ ಸಿಬ್ಬಂದಿ ಹಿಂಬರಹ ವೈರಲ್ ಆಗಿದೆ.
ಕೋರ್ಟ್ ಗೆ ಹಾಜರುಪಡಿಸುವ ಮುನ್ನವೂ ಸಿಟಿ ರವಿಗೆ ತಪಾಸಣೆ ಮಾಡಲಾಗಿತ್ತು. ಈ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ತಪಾಸಣೆ ವರದಿ ಕೂಡ ಬಹಿರಂಗವಾಗಿದೆ. ಸಿಟಿ ರವಿ ಫಿಟ್ ಆಗಿದ್ದಾರೆ ಎಂದು ವರದಿ ನೀಡಲಾಗಿದೆ. ಆದರೆ, ರವಿ ಮಾತ್ರ ಮೂರ್ನಾಲ್ಕು ದಿನಗಳಿಂದಲೂ ಬ್ಯಾಂಡೇಜ್ ಹಾಗೆಯೇ ಉಳಿಸಿಕೊಂಡಿದ್ದಾರೆ. ಹೀಗಾಗಿ ಅವರ ಕುರಿತ ವೈದ್ಯಕೀಯ ವರದಿ ಬಹಿರಂಗವಾಗಿದೆ.