ಬೆಂಗಳೂರು: ಆಪ್ತೆ ಶ್ವೇತಾಗೌಡ ಎಂಬ ಮಹಿಳೆ ಚಿನ್ನಾಭರಣ (Gold) ಖರೀದಿಸಿ ಮಾಲೀಕರಿಗೆ ವಂಚಿಸಿದ ಪ್ರಕರಣದಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್ (Varthur Prakash) ವಿಚಾರಣೆ ಎದುರಿಸಿದ್ದಾರೆ.
ಹಿಂದೆ 2 ಬಾರಿ ನೋಟೀಸ್ ನೀಡಿದ್ದರೂ ವರ್ತೂರ್ ಪ್ರಕಾಶ್ ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ ಮತ್ತೆ ನೋಟೀಸ್ ನೀಡಲಾಗಿತ್ತು. ತನಿಖಾಧಿಕಾರಿ ಆಗಿರುವ ಎಸಿಪಿ ಗೀತಾ ಅವರ ಮುಂದೆ ವರ್ತೂರು ಪ್ರಕಾಶ್ ವಿಚಾರಣೆಗೆ ಹಾಜರಾಗಿದ್ದಾರೆ. ಈ ವೇಳೆ 10.5 ಲಕ್ಷ ನಗದು ಹಾಗು 100 ಗ್ರಾಂ ಚಿನ್ನವನ್ನು ವರ್ತೂರು ಪ್ರಕಾಶ್ ಪೊಲೀಸರಿಗೆ ನೀಡಿದ್ದಾರೆ ಎನ್ನಲಾಗಿದೆ.
ವಿಚಾರಣೆ ಸಂದರ್ಭದಲ್ಲಿ ವರ್ತೂರ್ ಪ್ರಕಾಶ್ 10.50 ಲಕ್ಷ ರೂ. ನಗದು, ಮೂರು ಬ್ರೇಸ್ ಲೈಟ್ ಹಾಗೂ ಒಂದು ಚಿನ್ನದ ಉಂಗುರ ಮರಳಿ ನೀಡಿದ್ದಾರೆ. ಈ ವೇಳೆ ಆಕೆ ಹೀಗೆ ಮಾಡುತ್ತಾಳೆಂದು ನನಗೆ ಗೊತ್ತಿರಲಿಲ್ಲ. ನನಗೂ ಅವಳಿಗೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ.
ನವರತ್ನ ಜ್ಯುವೆಲ್ಲರಿ ಮಾಲೀಕರಿಂದ ಎರಡೂವರೆ ಕೋಟಿ ಮೌಲ್ಯದ 2 ಕೆಜಿ 945 ಗ್ರಾಂ ಚಿನ್ನಾಭರಣ ಪಡೆದಿದ್ದ ಶ್ವೇತಾಗೌಡ ಎಂಬ ಮಹಿಳೆ, ವರ್ತೂರು ಪ್ರಕಾಶ್ ಅವರ ಬೆಂಗಳೂರು ನಿವಾಸದ ವಿಳಾಸ ನೀಡಿ ಚಿನ್ನ ಪಡೆದಿದ್ದಳು.