2025ರ ವರ್ಷಚರಣೆಗೆ ಈಗಾಗಲೇ ನಗರದ ಎಲ್ಲೆಡೆ ಸಿದ್ದತೆ ನಡೆಯುತ್ತಿದ್ದು. ಹೊಸ ವರ್ಷ ವೆಲ್ ಕಂ ಮಾಡುವುದಕ್ಕೆ ಬೆಂಗಳೂರು ಪೊಲೀಸರು, ಪಾಲಿಕೆ ಮುಂಜಾಗೃತ ಕ್ರಮಕ್ಕೆ ಸಜ್ಜಾಗುತ್ತಿದೆ.
ಇತ್ತ ಹೋಟೇಲ್ ಹಾಗೂ ಬಾರ್ ಮಾಲೀಕರು ಡಿಸೆಂಬರ್ 31ಕ್ಕೆ ಫುಲ್ ನೈಟ್ ವ್ಯಾಪಾರಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಹೊಸ ವರ್ಷದ ಅಚಾರಣೆಗೆ ನಗರದ ಪ್ರಮುಖ ಬಾರ್ ಪಬ್ ರೆಸ್ಟೋರೆಂಟ್ ಗಳು ಈಗಾಗಲೇ ಬುಕ್ಕಿಂಗ್ ಕ್ಲೋಸ್ ಆಗಿದೆ. ಇತ್ತ ಹೊಸ ವರ್ಷಚಾರಣೆಯ ಸೆಲೆಬ್ರೆಶನ್ ಗೆ ಭರ್ಜರಿಯಾಗಿ ತಯಾರಿ ನಡೆದಿದೆ. ಹೋಟೆಲ್, ಬಾರ್, ಪಬ್, ಸ್ಟಾರ್ ಹೋಟೆಲ್ ಗಳಲ್ಲಿ ಡಿಫ್ರೆಂಟ್ ಡಿಫ್ರೇಂಟ್ ಇವೆಂಟ್ ಗಳನ್ನ ಆಯೋಜನೆ ಮಾಡುತ್ತಿದ್ದು, ಫುಲ್ ನೈಟ್ ಪಾರ್ಟಿ ಮಾಡುವುದಕ್ಕೆ ಬೆಂಗಳೂರು ಸಜ್ಜಾಗುತ್ತಿದೆ.
ನ್ಯೂಇಯರ್ ದಿನ 24 ಗಂಟೆಗಳ ಕಾಲ ರೆಸ್ಟೋರೆಂಟ್ ಓಪನ್ ಮಾಡುವುದಕ್ಕೆ ಹೋಟೆಲ್, ಬಾರ್ ಮಾಲೀಕರ ಸಂಘ ಮನವಿ ಮಾಡಿದೆ.
ನ್ಯೂಇಯರ್ ದಿನ ಹಾಗೂ ನ್ಯೂಇಯರ್ ಹಿಂದಿನ ದಿನ ರೆಸ್ಟೋರೆಂಟ್ ಗಳನ್ನ 24 ಗಂಟೆಗಳ ಕಾಲ ಓಪನ್ ಮಾಡಲು ಅವಕಾಶ ನೀಡುವಂತೆ ಹೋಟೆಲ್ ಮಾಲೀಕರ ಸಂಘ ಮನವಿ ಮಾಡಿದೆ. ಪೊಲೀಸ್ ಇಲಾಖೆ 24 ಗಂಟೆಗಳ ಕಾಲ ಓಪನ್ ಮಾಡಲು ಅವಕಾಶ ನೀಡುವುದು ಡೌಟ್ ಎನ್ನಲಾಗಿದೆ.
ಈ ಬಾರಿ ಬ್ರಿಗೇಡ್ ರೋಡ್ ಹಾಗೂ ಎಂಜಿ ರೋಡ್ ನಲ್ಲೂ ದೊಡ್ಡ ಸೆಲೆಬ್ರೆಶನ್ ನಡೆಯಲಿದೆ. ಜನ ಸೇರೋದಕ್ಕೆ ಅವಕಾಶ ನೀಡಲಾಗ್ತಿದೆ. ಇನ್ನೂ ಸ್ಟಾರ್ ಹೋಟೆಲ್ ಗಳು ಈಗಾಲೇ ಡಿಜೆ ಪಾರ್ಟಿಗೆ ಬುಕಿಂಗ್ ಸ್ಟಾರ್ಟ್ ಮಾಡಿಕೊಂಡಿವೆ. ಪಬ್ ಮಾಲೀಕರು ಈ ಬಾರಿ ಹಣ ಕೊಳ್ಳೆ ಹೊಡೆಯೋದಕ್ಕೆ ಬೇರೆ ಬೇರೆ ರಾಜ್ಯಗಳಿಂದ ಡಿಜೆಗಳನ್ನು ತರಿಸುತ್ತಿದ್ದಾರೆ. ಫ್ರೀ ಬುಕಿಂಗ್ ಸ್ಟಾರ್ಟ್ ಆಗಿದ್ದು. ಹೊಸ ವರ್ಷಚಾರಣೆ ಸಿದ್ದತೆ ನಡೆದಿದೆ. ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.