ಉಪೇಂದ್ರ ನಟಿಸಿರುವ ‘ಯುಐ’ ಚಿತ್ರ ಸಾಕಷ್ಟು ನಿರೀಕ್ಚೆ ಮೂಡಿಸಿದ್ದು, ಸಿನಿ ರಸಿಕರಿಂದಲೂ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ.
ವೀಕೆಂಡ್ನಲ್ಲಿ ಸಿನಿಮಾ ಉತ್ತಮ ಗಳಿಕೆ ಮಾಡಿತ್ತು. ಅದೇ ರೀತಿ ವಾರದ ದಿನವೂ ಚಿತ್ರಕ್ಕೆ ಒಳ್ಳೆಯ ಕಲೆಕ್ಷನ್ ಹರಿದು ಬಂದಿದೆ. ಸದ್ಯದ ಮಾಹಿತಿಯಂತೆ ಚಿತ್ರವು ಇಲ್ಲಿಯವರೆಗೆ 20 ಕೋಟಿ ರೂ. ಕಲೆಕ್ಷನ್ ಮಾಡಿದೆ. ‘ಯುಐ’ ಸಿನಿಮಾ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಈ ನಿರೀಕ್ಷೆಯನ್ನು ಸಿನಿಮಾ ಹುಸಿ ಮಾಡಲಿಲ್ಲ. ಅನೇಕರು ಮತ್ತೆ ಮತ್ತೆ ಚಿತ್ರಮಂದಿರಕ್ಕೆ ತೆರಳುತ್ತಿದ್ದಾರೆ. ಈ ಕಾರಣದಿಂದಲೇ ಸಿನಿಮಾದ ಗಳಿಕೆ ಹೆಚ್ಚುತ್ತಿದೆ. ಆದರೆ, ಮೊದಲ ಮೂರು ದಿನ ಉತ್ತಮ ಗಳಿಕೆ ಮಾಡಿದ್ದ ಈ ಸಿನಿಮಾ ನಾಲ್ಕನೇ ದಿನ ಸ್ವಲ್ಪ ಡಲ್ ಹೊಡೆದಿದೆ.
‘ಯುಐ’ ಸಿನಿಮಾ ಸೋಮವಾರ 2.50 ಕೋಟಿ ರೂಪಾಯಿಯಷ್ಟು ಗಳಿಕೆ ಮಾಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ 20.85 ಕೋಟಿ ರೂಪಾಯಿ ಆಗಿದೆ. ಭಾನುವಾರ ಸುಮಾರು 6 ಕೋಟಿ ರೂಪಾಯಿ ಗಳಿಕೆ ಆಗಿತ್ತು. ಎಲ್ಲ ಕಡೆಗಳಲ್ಲಿ ಕ್ರಿಸ್ಮಸ್ ರಜೆ ನಡೆಯುತ್ತಿದೆ. ಹೀಗಾಗಿ ಈ ರಜೆ ಯಾವ ಸಿನಿಮಾಕ್ಕೆ ಭರ್ಜರಿ ಆದಾಯ ತಂದು ಕೊಡಲಿದೆ ಎಂಬುವುದನ್ನು ನೋಡಬೇಕಿದೆ.
ಡಿ. 25ಕ್ಕೆ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರದ ಬಗ್ಗೆ ಪ್ರೇಕ್ಷಕರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾ ರಿಲೀಸ್ ಆದ ಬಳಿಕ ‘ಯುಐ’ ಕಲೆಕ್ಷನ್ಗೆ ಕೊಂಚ ಹೊಡೆತ ಬೀಳುವ ಸಾಧ್ಯತೆ ಇದೆ.