ಚಿಕ್ಕಮಗಳೂರು: ಅರೆಸ್ಟ್ ಆಗಿ ಬಿಡುಗಡೆಯಾದ ನಂತರ ಸಿ.ಟಿ. ರವಿ ತಮ್ಮ ತಾಯ್ನಾಡಿಗೆ ತೆರಳಿದ್ದಾರೆ. ಈ ವೇಳೆ ಬೆಂಗಳೂರಿನಿಂದ ಚಿಕ್ಕಮಗಳೂರಿನವರೆಗೂ ದಾರಿಯುದ್ಧಕ್ಕೂ ಕಾರ್ಯಕರ್ತರು ಮೆರವಣಿಗೆ, ಪುಷ್ಪಾರ್ಚನೆ ಮಾಡಿ ಅದ್ಧೂರಿ ಸ್ವಾಗತ ಕೋರಿದ್ದಾರೆ. ಈ ವೇಳೆ ಆಂಬುಲೆನ್ಸ್ ಗಳ ಬಳಕೆಯಾಗಿದ್ದು, ಎಫ್ ಐಆರ್ ದಾಖಲಾಗಿದೆ.
ಚಿಕ್ಕಮಗಳೂರಿನಲ್ಲಿ ಭರ್ಜರಿ ರೋಡ್ ಶೋ ಮಾಡಿದ್ದ ಸಂದರ್ಭದಲ್ಲಿ ಆಂಬುಲೆನ್ಸ್ ಗಳು ಸೈರನ್ ಹಾಕಿ ಸ್ವಾಗತಿಸಿವೆ. ಈ ಕುರಿತು ಎಫ್ ಐಆರ್ ದಾಖಲಿಸಲಾಗಿದೆ. ಕೈಮರದಿಂದ ಸೈರನ್ ಹಾಕಿಕೊಂಡು ಬಂದಿದ್ದ 7 ಆ್ಯಂಬುಲೆನ್ಸ್ ಗಳ ಮೇಲೆ ಈಗ ಪ್ರಕರಣ ದಾಖಲಿಸಲಾಗಿದೆ.
ರೋಗಿಗಳಲ್ಲಿದೆ ಸೈರನ್ ಹಾಕಿಕೊಂಡು ಹಾಗೂ ಟಾಪ್ ನಲ್ಲಿ ಲೈಟ್ ಹಾಕಿಕೊಂಡು ಬಂದಿದ್ದ 7 ಆ್ಯಂಬ್ಯುಲೆನ್ಸ್ ಚಾಲಕ, ಮಾಲೀಕರ ವಿರುದ್ಧ ಈಗ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.