ದಕ್ಷಿಣ ಕನ್ನಡ : ಸಿಟಿ ರವಿ ವಿಚಾರವನ್ನು ವಿರೋಧಿಸಿದೆ ಬಿಜೆಪಿ ನಾಯಕರು ಸಮರ್ಥನೆ ಮಾಡಿಕೊಳ್ಳುತ್ತಿರುವುದು ದುರಾದೃಷ್ಟಕರ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.
ಪುತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸಿ.ಟಿ. ರವಿ ಅಶ್ಲೀಲ ಪದ ಬಳಿಸಿರುವುದು ಸತ್ಯ. ಇದು ಕಟ್ಟುಕಥೆಯಲ್ಲ. ಆ ವಿಡಿಯೋವನ್ನು ನಾವು ನೋಡಿದ್ದೇವೆ. ಪರಿಷತ್ ನಲ್ಲಿರುವ ಅನೇಕ ಸದಸ್ಯರೂ ಇದನ್ನು ನೋಡಿದ್ದಾರೆ. ಸಿಟಿ ರವಿ ಹೇಳಿಕೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದರೆ, ಇಷ್ಟಿದ್ದರೂ ಬಿಜೆಪಿಯವರು ಮಾತ್ರ ಸಮರ್ಥನೆ ಮಾಡಿಕೊಳ್ಳುತ್ತಿರುವುದು ದುದದೃಷ್ಟಕರ. ಇದು ಬಿಜೆಪಿಯ ಸಂಸ್ಕೃತಿ ತೋರಿಸುತ್ತದೆ. ಸಿಟಿ ರವಿ ಹೇಳಿಕೆಗೆ ಬಿಜೆಪಿ ಪಕ್ಷದ ವಿರೋಧವೂ ಇಲ್ಲ, ಖಂಡನೆಯೂ ಇಲ್ಲ, ಬಿಜೆಪಿಯವರು ದೇವರು, ಧರ್ಮ, ಭಾರತ್ ಮಾತಾ ಕಿ ಜೈ ಮಾತ್ರ ಹೇಳೋದು. ಆದರೆ, ಮಹಿಳೆಯರ ಬಗ್ಗೆ ಗೌರವವಿಲ್ಲ. ಬೇಲ್ ಸಿಕ್ಕಿದ ವಿಚಾರದಲ್ಲಿ ಬಿಜೆಪಿ ಡ್ರಾಮಾ ಮಾಡುತ್ತಿದೆ ಎಂದು ಗುಡುಗಿದ್ದಾರೆ.
ಈ ಘಟನೆಯ ನಂತರ ಬಿಜೆಪಿ ಹಾಗೂ ಆರೆಸ್ಸೆಸ್ ನಿಲುವು ಕೂಡ ಸ್ಪಷ್ಟವಾದಂತಿದೆ. ಬಿಜೆಪಿ ಹಾಗೂ ಆರೆಸ್ಸೆಸ್ ಕೂಡ ತನ್ನ ನಿಲುವನ್ನು ಸ್ಪಷ್ಟಪಡಿಸಬಪೇಕು ಎಂದು ಆಗ್ರಹಿಸಿದ್ದಾರೆ.
ಸಿ.ಟಿ. ರವಿ ವಿಚಾರದಲ್ಲಿ ಸಮರ್ಥನೆ ದುರದೃಷ್ಟಕರ; ದಿನೇಶ್ ಗುಂಡೂರಾವ್