ಬೆಂಗಳೂರು: ಅಧಿವೇಶನದಲ್ಲಿ ಈ ಬಾರಿ ಸರ್ಕಾರವನ್ನು ನಾವು ಸಮರ್ಥವಾಗಿ ಕಟ್ಟಿ ಹಾಕಿದ್ದೇವೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಈ ಬಾರಿ ಒಗ್ಗಟ್ಟಿನಿಂದ ಹೋರಾಟ ಮಾಡಿದೆ. ಆದರೆ, ಈ ಬಾರಿ ಕೇವಲ 5 ದಿನಗಳು ಮಾತ್ರ ಚರ್ಚೆಗೆ ಅವಕಾಶ ಸಿಕ್ಕವು. ವಕ್ಫ್, ಬಾಣಂತಿಯರ ಸಾವು, ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಚರ್ಚೆ ಮಾಡಿ ಸರ್ಕಾರದ ವಿರುದ್ಧ ಪ್ರಬಲವಾದ ಹೋರಾಟ ಮಾಡಿದ್ದೇವೆ. ನಮ್ಮ ಹೋರಾಟದ ಫಲವಾಗಿ ಸರ್ಕಾರವು ವಕ್ಫ್ ವಿಚಾರದಲ್ಲಿ ನ್ಯಾಯಾಂಗ ತನಿಖೆ ಮಾಡಿದೆ. ಬಾಣಂತಿಯರ ಸಾವಿನ ವಿಚಾರದಲ್ಲೂ ನ್ಯಾಯಾಂಗ ತನಿಖೆ ಮಾಡಲು ಒಪ್ಪಿದ್ದು ನಮ್ಮ ಹೋರಾಟದ ಫಲ ಎಂದು ಹೇಳಿದ್ದಾರೆ.
ನಾವು ಈ ಬಾರಿಯೂ ಉತ್ತರ ಕರ್ನಾಟಕದ ಸಮಸ್ಯೆಗಳ ಮೇಲೆಯೂ ಬೆಳಕು ಚೆಲ್ಲಿದ್ದೇವೆ. 30ಕ್ಕೂ ಅಧಿಕ ಶಾಸಕರು ಚರ್ಚೆ ಮಾಡಿದ್ದಾರೆ ಎಂದರು.