ಕ್ರಿಸ್ ಮಸ್ ಹಾಗೂ ನ್ಯೂ ಇಯರ್ ಸಮೀಪಿಸುತ್ತದೆ ಎಂದರೆ ಸಾಕು ಜನರು ಭರ್ಜರಿ ತಯಾರಿ ನಡೆಸುತ್ತಿರುತ್ತಾರೆ. ಆದರೆ, ಈ ಬಾರಿ ಮಾತ್ರ ಇನ್ನೂ ತಯಾರಿ ನಡೆಯುತ್ತಿಲ್ಲ.
ಇಷ್ಟೊತ್ತಿಗಾಗಲೇ ಸಿಲಿಕಾನ್ ಸಿಟಿಯಲ್ಲಿನ ರಸ್ತೆಗಳೆಲ್ಲ ಝಗ-ಮಗಗೊಳ್ಳುತ್ತಿದ್ದವು. ಆದರೆ, ಈ ಬಾರಿ ಮಾತ್ರ ಸಿಲಿಕಾನ್ ಸಿಟಿಯ ರಸ್ತೆಗಳೀಗ ಪುಲ್ ಡಲ್ ಇದ್ದಂತೆ ಕಾಣುತ್ತಿವೆ. ನ್ಯೂ ಇಯರ್ ಗೆ ಸಾಕಷ್ಟು ಬ್ಯುಸಿನೆಸ್ ಆಗುತ್ತೆ ಅಂದುಕೊಂಡಿದ್ದ ವ್ಯಾಪಾರಿಗಳು ಕೂಡ ಡಲ್ ಆಗಿದ್ದಾರೆ.
ಇನ್ ಪ್ಯಾಂಟ್ರಿ ರಸ್ತೆಯಿಂದ ಕಮರ್ಷಿಯಲ್ ಸ್ಟ್ರೀಟ್ಸ್ ನೇರವಾಗಿ ತೆರಳುವ ಮಾರ್ಗದ ರಸ್ತೆ ಅಗೆದಿದ್ದು, ವೈಟ್ ಟಾಪಿಂಗ್ ಹಾಗೂ ಜಲ ಮಂಡಳಿ ಒಳಚರಂಡಿ ಪೈಪ್ ಲೈನ್ ಅಳವಡಿಕೆ ಕಾರ್ಯ ನಡೆಯುತ್ತಿದೆ. ಒಂದೇ ತಿಂಗಳಲ್ಲಿ ಮುಗಿಯಬೇಕಿದ್ದ ಕಾಮಗಾರಿ ಕುಂಟುತ್ತ ಸಾಗಿದೆ. ಧೂಳು, ಡಸ್ಟ್, ಸೌಂಡ್ ನಿಂದಾಗಿ ಜನರು ಜನರು ಕಮರ್ಷಿಯಲ್ ಸ್ಟ್ರೀಟ್ಸ್ ನತ್ತ ಬರಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಲೈಟ್ ಅಲಾಂಕರಗಳಿಂದ ಕಂಗೊಳಿಸ ಬೇಕಿದ್ದ ರಿಚೆಸ್ಟ್ ರೋಡ್ ಎಂದಿನಂತೆ ಸಾಮಾನ್ಯವಾಗಿ ಕಾಣುತ್ತಿದೆ. ಜನರು ಬರಲು ಹಿಂದೇಟು ಹಾಕುತ್ತಿರುವಂತೆ ಕಾಣುತ್ತಿದೆ.
ಈ ನಿಟ್ಟಿನಲ್ಲಿ ಈಗಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ಸ್ ನಲ್ಲಿ ಜನರಿಲ್ಲದೆ ಬಿಕೋ ಎನ್ನುತ್ತಿವೆ. ಇಯರ್ ಎಂಡ್ ಗಾಗಿ ಲಕ್ಷಾಂತರ ರೂ ಬಂಡವಾಳ ಹಾಕಿರುವ ವ್ಯಾಪಾರಿಗಳ ಕಣ್ಣು ಕೆಂಪಾಗಿವೆ. BBMP ,BWSSB ಕಠಿಣ ನಿಯಮ ಸೇರಿದಂತೆ ಹಲವಾರು ಕಟ್ಟಪಾಡು ತಂದಿರುವುದರಿಂದಾಗಿ ಸೆಲೆಬ್ರಿಟಿಯಲ್ಲಿ ಮಿಂದೇಳಬೇಕಿದ್ದ ಜನರು ರಸ್ತೆಗೆ ಬಾರದಂತಾಗಿದೆ.